alex Certify ಆನ್​​ಲೈನ್​ ತರಗತಿಯಲ್ಲೇ ಶಿಕ್ಷಕರಿಗೆ ವಿಶೇಷ ಧನ್ಯವಾದ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​​ಲೈನ್​ ತರಗತಿಯಲ್ಲೇ ಶಿಕ್ಷಕರಿಗೆ ವಿಶೇಷ ಧನ್ಯವಾದ: ವಿಡಿಯೋ ವೈರಲ್​

2020ರ ವರ್ಷ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರವಂತೂ ಈಗೀಗ ಸಹಜ ಸ್ಥಿತಿಯತ್ತ ತಲುಪುತ್ತಿದೆ.
ಕೊರೊನಾದಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆನ್​ಲೈನ್​ ತರಗತಿಗಳಲ್ಲಿ ಬಾಕಿಯಾಗಬೇಕಾದ ಅನಿವಾರ್ಯತೆ ಬಂದೊದಗಿದೆ.

ಪ್ರತಿವರ್ಷ ತರಗತಿಗಳಲ್ಲಿ ಭೇಟಿಯಾಗ್ತಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಾಗಿ ಆನ್​ಲೈನ್​ ಕ್ಲಾಸ್​ನಲ್ಲೇ ಭೇಟಿಯಾಗಿದ್ದಾರೆ.
ಆನ್​ಲೈನ್​ ತರಗತಿಗಳನ್ನ ನಡೆಸೋದು ಅಂದ್ರೆ ಶಿಕ್ಷಕರಿಗೆ ಸುಲಭದ ಮಾತಲ್ಲ. ಮನೆಯಲ್ಲಿ ಎಲ್ಲೋ ಕುಳಿತ ವಿದ್ಯಾರ್ಥಿಯೂ ಪಾಠವನ್ನ ಕೇಳಬೇಕು ಅನ್ನುವಂತೆ ಮಾಡೋಕೆ ಶ್ರಮ ತುಂಬಾನೇ ಅಗತ್ಯ. ಅನೇಕರು ಈ ತಲೆನೋವೇ ಬೇಡ ಎಂದು ಕೆಲಸವನ್ನೇ ಬಿಟ್ಟಿದ್ದರೆ ಇನ್ನು ಕೆಲ ಶಿಕ್ಷಕರು ಮಾತ್ರ ಎಂತಹ ಕಠಿಣ ಸವಾಲನ್ನೂ ಎದುರಿಸಿ ಮಕ್ಕಳಿಗೆ ಪಾಠ ಮಾಡಿದ್ದಾರೆ.

ಪ್ರಾಮಾಣಿಕ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಶಿಕ್ಷಕನಿಗೆ ಆನ್​ಲೈನ್​ ಕ್ಲಾಸ್​ನಲ್ಲೇ ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದು ಇದನ್ನ ಕಂಡ ಶಿಕ್ಷಕ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಟಿಕ್​ಟಾಕ್​​ನಲ್ಲಿ @Laurenherrle13 ಎಂಬವರು ಈ ವಿಡಿಯೋ ಶೇರ್​ ಮಾಡಿದ್ದು ಕೊನೆಯ ಆನ್​ಲೈನ್​ ತರಗತಿಯಲ್ಲಿ ವಿಶೇಷ ಶಿಕ್ಷಕರಿಗೆ ಧನ್ಯವಾದ ಹೇಳಿದ್ದೇವೆ ಎಂದು ಶೀರ್ಷಿಕೆ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...