2020ರ ವರ್ಷ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರವಂತೂ ಈಗೀಗ ಸಹಜ ಸ್ಥಿತಿಯತ್ತ ತಲುಪುತ್ತಿದೆ.
ಕೊರೊನಾದಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆನ್ಲೈನ್ ತರಗತಿಗಳಲ್ಲಿ ಬಾಕಿಯಾಗಬೇಕಾದ ಅನಿವಾರ್ಯತೆ ಬಂದೊದಗಿದೆ.
ಪ್ರತಿವರ್ಷ ತರಗತಿಗಳಲ್ಲಿ ಭೇಟಿಯಾಗ್ತಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಾಗಿ ಆನ್ಲೈನ್ ಕ್ಲಾಸ್ನಲ್ಲೇ ಭೇಟಿಯಾಗಿದ್ದಾರೆ.
ಆನ್ಲೈನ್ ತರಗತಿಗಳನ್ನ ನಡೆಸೋದು ಅಂದ್ರೆ ಶಿಕ್ಷಕರಿಗೆ ಸುಲಭದ ಮಾತಲ್ಲ. ಮನೆಯಲ್ಲಿ ಎಲ್ಲೋ ಕುಳಿತ ವಿದ್ಯಾರ್ಥಿಯೂ ಪಾಠವನ್ನ ಕೇಳಬೇಕು ಅನ್ನುವಂತೆ ಮಾಡೋಕೆ ಶ್ರಮ ತುಂಬಾನೇ ಅಗತ್ಯ. ಅನೇಕರು ಈ ತಲೆನೋವೇ ಬೇಡ ಎಂದು ಕೆಲಸವನ್ನೇ ಬಿಟ್ಟಿದ್ದರೆ ಇನ್ನು ಕೆಲ ಶಿಕ್ಷಕರು ಮಾತ್ರ ಎಂತಹ ಕಠಿಣ ಸವಾಲನ್ನೂ ಎದುರಿಸಿ ಮಕ್ಕಳಿಗೆ ಪಾಠ ಮಾಡಿದ್ದಾರೆ.
ಪ್ರಾಮಾಣಿಕ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಶಿಕ್ಷಕನಿಗೆ ಆನ್ಲೈನ್ ಕ್ಲಾಸ್ನಲ್ಲೇ ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದು ಇದನ್ನ ಕಂಡ ಶಿಕ್ಷಕ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಟಿಕ್ಟಾಕ್ನಲ್ಲಿ @Laurenherrle13 ಎಂಬವರು ಈ ವಿಡಿಯೋ ಶೇರ್ ಮಾಡಿದ್ದು ಕೊನೆಯ ಆನ್ಲೈನ್ ತರಗತಿಯಲ್ಲಿ ವಿಶೇಷ ಶಿಕ್ಷಕರಿಗೆ ಧನ್ಯವಾದ ಹೇಳಿದ್ದೇವೆ ಎಂದು ಶೀರ್ಷಿಕೆ ನೀಡಲಾಗಿದೆ.