ಸಾಮಾನ್ಯವಾಗಿ ಮೊಸಳೆಗಳಿಗೆ ಸಿಟ್ಟು ಬಹಳ ಹೆಚ್ಚು. ಹಾಗಾಗಿ ಅವುಗಳ ತಂಟೆಗೆ ಯಾರೂ ಸಹ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ಮೊಸಳೆಗಳು ತಂತಮ್ಮ ಆವಾಸ ಸ್ಥಾನಗಳನ್ನು ಬಿಟ್ಟು ಮಾನವ ವಸತಿ ಪ್ರದೇಶಗಳಿಗೆ ಬಂದುಬಿಡುವ ನಿದರ್ಶನಗಳು ಘಟಿಸುತ್ತವೆ.
ಇಂಥದ್ದೇ ಒಂದು ನಿದರ್ಶನದಲ್ಲಿ, ಫ್ಲಾರಿಡಾದ ಟಾಂಪಾದಲ್ಲಿ ಮನೆಯೊಂದರ ಮುಂದಿನ ಅಂಗಳದಲ್ಲಿ ಚಿಲ್ ಮಾಡುತ್ತಾ ಪ್ರತ್ಯಕ್ಷವಾಗಿದೆ. ಮತ್ತೊಂದು ಮೊಸಳೆಯೊಂದಿಗೆ ಜಗಳವಾಡಿದಂತೆ ಕಂಡ ಮೊಸಳೆ ತನ್ನ ಮುಂಗಾಲುಗಳೆರಡನ್ನೂ ಕಳೆದುಕೊಂಡಿತ್ತು.
ಈ ಘಟನೆಯ ಒಂದಷ್ಟು ಫೋಟೋಗಳನ್ನು ತೆಗೆದು ‘Croc Encounters’ ಎಂಬ ಫೇಸ್ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
https://www.facebook.com/crocencounters/posts/3501647573187017