alex Certify ಗಾಳಿಯ ರಭಸಕ್ಕೆ‌ ನಡುರಸ್ತೆಯಲ್ಲೇ ಉರುಳುರುಳಿ ಬಿತ್ತು ಟ್ರಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಳಿಯ ರಭಸಕ್ಕೆ‌ ನಡುರಸ್ತೆಯಲ್ಲೇ ಉರುಳುರುಳಿ ಬಿತ್ತು ಟ್ರಕ್

ಇದೊಂದು ಅಚ್ಚರಿಯೇ ಸರಿ. ಬಲವಾದ ಗಾಳಿಯು ಲಗ್ಗೇಜ್ ಸಾಗಿಸುವ ವಾಹನವನ್ನು ಮೇಲಕ್ಕೆತ್ತಿ ತಿರುಗಿಸಿ ರಸ್ತೆಯಿಂದ ಆಚೆಗೆ ಎಸೆದಿರುವ ವಿಡಿಯೋ ವೈರಲ್ ಆಗಿದೆ.

ಚೈನಾದ ಇಂಚುವಾನ್ ನಲ್ಲಿ ನಡೆದ ಈ ಘಟನೆ ಸಂಚಾರಿ ಕಣ್ಗಾವಲು ಕ್ಯಾಮರಾದಲ್ಲಿ ಸೆರೆಯಾಗಿದೆ.

ರಸ್ತೆಯಲ್ಲಿದ್ದ ವಾಹನಗಳೆಲ್ಲ ಹಸಿರು ದೀಪದ ನಿಶಾನೆಗಾಗಿ ಕಾಯುತ್ತಿದ್ದಾಗ ಏಕಾಏಕಿ ರಭಸವಾಗಿ ಗಾಳಿ ಬೀಸಿದೆ, ಸರಿಸುಮಾರು 1.8 ಟನ್ ತೂಗುತ್ತಿದ್ದ ಲಗೇಜ್ ವಾಹನವನ್ನು ಮಾತ್ರ ಗಾಳಿ ತಿರುಗಿಸಿ ಎಸೆದಿದೆ.

ಅದೃಷ್ಟವಶಾತ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ. ವಾಹನದೊಳಗಿದ್ದ ಇತರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಕುತೂಹಲಕಾರಿ ಅಪಘಾತಕ್ಕೆ ಕಾರಣ ಏನೆಂದು ಕಂಡುಹಿಡಿಯಲು ತಜ್ಞರು ಪ್ರಯತ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...