ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ.
ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಕರಗಿಸುತ್ತಿದೆ. ಈ ಘಟನೆಯು ಉತ್ತರ ಚೀನಾದ ಜಿಂಝಾಂಗ್ ಶಾಂಕ್ಸಿ ಪ್ರದೇಶದಲ್ಲಿ ಘಟಿಸಿದೆ.
ಆಹಾರ ಸಿಗದೇ ಬಹಳ ಹೊಟ್ಟೆ ಹಸಿದಂತೆ ಕಾಣುವ ಈ ನಾಯಿಯನ್ನು ಕಂಡು ಮರುಗಿದ ಮಹಿಳೆಯೊಬ್ಬರು ಅದಕ್ಕೆ ತಿನ್ನಲು ಒಂದಷ್ಟು ತಿಂಡಿ ಕೊಟ್ಟಿದ್ದಾರೆ.
ಇದಾದ ಮಾರನೇ ದಿನವೂ ಸಹ ಆ ಮಹಿಳೆ ಆ ಜಾಗಕ್ಕೆ ಬರುತ್ತಲೇ ಆ ನಾಯಿ ಬಾಲ ಅಲ್ಲಾಡಿಸಿಕೊಂಡು ಓಡೋಡಿ ಬಂದಿದೆ. ಆಗಲೂ ಸಹ ನಾಯಿ ಸಂತಸದಿಂದ ಆನಂದ ಭಾಷ್ಪ ಹರಿಸಿದೆ.