alex Certify ಮೂಕವಿಸ್ಮಿತರನ್ನಾಗಿಸುತ್ತೆ ಅಪರೂಪದ ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಕವಿಸ್ಮಿತರನ್ನಾಗಿಸುತ್ತೆ ಅಪರೂಪದ ಈ ಘಟನೆ

ಬೀದಿ ಬದಿಯಲ್ಲಿದ್ದ ಬೆಕ್ಕಿಗೆ ಸಹಾಯ ಮಾಡಿದ್ದ ಮಹಿಳೆಗೆ ಆ ಬೆಕ್ಕು ತನ್ನ ಮಕ್ಕಳ ಸಮೇತ ಬಂದು ಧನ್ಯವಾದ ಪ್ರದರ್ಶಿಸಿದ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ.

ನಿತ್ಯ ತನ್ನ ಮನೆಯ ಗಾರ್ಡನ್​ನಲ್ಲಿ ಕಾಣಿಸಿಕೊಳ್ತಿದ್ದ ಬೆಕ್ಕಿಗೆ ಲೆಸಿಯಾನೆ ತಿನ್ನೋಕೆ ಆಹಾರ ನೀಡುತ್ತಿದ್ದರು. ಅಲ್ಲದೇ ಆ ಬೆಕ್ಕಿದೆ ಉಸಾಗಿ ಎಂದು ನಾಮಕರಣವನ್ನೂ ಮಾಡಿದ್ದರು.

ಆದರೆ ಇದ್ದಕ್ಕಿಂದ್ದಂತೆ ಆ ಬೆಕ್ಕು ಕಾಣೆಯಾಗಿತ್ತು. ಲಿಸಿಯಾನೆ ಬೆಕ್ಕನ್ನ ಹುಡುಕಲು ತುಂಬಾ ಪ್ರಯತ್ನಿಸಿ ಬಳಿಕ ಅದರಲ್ಲಿ ವಿಫಲರಾಗಿದ್ರು. ಇನ್ನೇನು ಬೆಕ್ಕಿನ ಆಸೆ ಬಿಡಬೇಕು ಅನ್ನೋವಷ್ಟರಲ್ಲಿ ಆ ಬೆಕ್ಕು ತನ್ನ 6 ಮರಿಗಳ ಸಮೇತ ಲೆಸಿಯಾನೆ ಮನೆ ಮುಂದೆ ಬಂದು ನಿಲ್ಲುವ ಮೂಲಕ ಆಶ್ಚರ್ಯ ಮೂಡಿಸಿದೆ.

ಪ್ರಾಣಿಗಳ ರಕ್ಷಣೆ ಕೇಂದ್ರವೊಂದು ಈ ಘಟನೆಯನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದು ನೆಟ್ಟಿಗರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...