ಬೀದಿ ಬದಿಯಲ್ಲಿದ್ದ ಬೆಕ್ಕಿಗೆ ಸಹಾಯ ಮಾಡಿದ್ದ ಮಹಿಳೆಗೆ ಆ ಬೆಕ್ಕು ತನ್ನ ಮಕ್ಕಳ ಸಮೇತ ಬಂದು ಧನ್ಯವಾದ ಪ್ರದರ್ಶಿಸಿದ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ.
ನಿತ್ಯ ತನ್ನ ಮನೆಯ ಗಾರ್ಡನ್ನಲ್ಲಿ ಕಾಣಿಸಿಕೊಳ್ತಿದ್ದ ಬೆಕ್ಕಿಗೆ ಲೆಸಿಯಾನೆ ತಿನ್ನೋಕೆ ಆಹಾರ ನೀಡುತ್ತಿದ್ದರು. ಅಲ್ಲದೇ ಆ ಬೆಕ್ಕಿದೆ ಉಸಾಗಿ ಎಂದು ನಾಮಕರಣವನ್ನೂ ಮಾಡಿದ್ದರು.
ಆದರೆ ಇದ್ದಕ್ಕಿಂದ್ದಂತೆ ಆ ಬೆಕ್ಕು ಕಾಣೆಯಾಗಿತ್ತು. ಲಿಸಿಯಾನೆ ಬೆಕ್ಕನ್ನ ಹುಡುಕಲು ತುಂಬಾ ಪ್ರಯತ್ನಿಸಿ ಬಳಿಕ ಅದರಲ್ಲಿ ವಿಫಲರಾಗಿದ್ರು. ಇನ್ನೇನು ಬೆಕ್ಕಿನ ಆಸೆ ಬಿಡಬೇಕು ಅನ್ನೋವಷ್ಟರಲ್ಲಿ ಆ ಬೆಕ್ಕು ತನ್ನ 6 ಮರಿಗಳ ಸಮೇತ ಲೆಸಿಯಾನೆ ಮನೆ ಮುಂದೆ ಬಂದು ನಿಲ್ಲುವ ಮೂಲಕ ಆಶ್ಚರ್ಯ ಮೂಡಿಸಿದೆ.
ಪ್ರಾಣಿಗಳ ರಕ್ಷಣೆ ಕೇಂದ್ರವೊಂದು ಈ ಘಟನೆಯನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು ನೆಟ್ಟಿಗರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.