alex Certify ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್​ ರಾಷ್ಟ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್​ ರಾಷ್ಟ್ರ

Burj Khalifa lights up with Indian tricolour in support during Covid-19 crisis. Watch video - Trending News Newsದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರುವ ಬೆನ್ನಲ್ಲೇ ಯುನೈಟೆಡ್​ ಎಮಿರೇಟ್ಸ್ ನ​ ಬುರ್ಜ್ ಖಲೀಫಾ ಭಾರತದ ಕೊರೊನಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ವಿಶ್ವದ ಅತೀ ಎತ್ತರದ ಕಟ್ಟಡದಲ್ಲಿ ತ್ರಿವರ್ಣ ಧ್ವಜದ ಬೆಳಕು ರಾರಾಜಿಸಿದ್ದು ಮಾತ್ರವಲ್ಲದೇ ʼಸದೃಢವಾಗಿರು ಭಾರತʼ ಎಂಬ ಸಂದೇಶವನ್ನ ಭಾನುವಾರ ರಾತ್ರಿ ನೀಡಲಾಗಿದೆ.

ಭಾರತವು ಕೋವಿಡ್​ 19 ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ, ಯುಎಇ ಭಾರತಕ್ಕೆ ಶುಭಾಶಯಗಳನ್ನ ತಿಳಿಸುತ್ತಿದೆ, ದುಬೈನ ಬುರ್ಜ್ ಖಲೀಫಾ ಪ್ರಮುಖ ಕಟ್ಟಡದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸುವ ಮೂಲಕ ನಮ್ಮ ಈ ಹೋರಾಟಕ್ಕೆ ನಮ್ಮ ಬೆಂಬಲವನ್ನ ನೀಡುತ್ತಿದ್ದೇವೆ ಎಂದು ಭಾರತದ ರಾಯಭಾರಿ ಕಚೇರಿ ಯುಎಇ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದೆ.

ಯುಎಇ ಭಾರತದ ರಾಯಭಾರಿ ಪವನ್​ ಕಪೂರ್​, ಈ ಕಷ್ಟದ ಸಂದರ್ಭದಲ್ಲಿ ಭಾರತದ ಪರವಾಗಿ ಯುಎಇ ನೀಡಿದ ಬೆಂಬಲವನ್ನ ನಾವು ಪ್ರಶಂಸಿಸುತ್ತಿದ್ದೇವೆ ಎಂದು ಟ್ವಿಟರ್​ನಲ್ಲಿ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ಕಳೆದ 10 ದಿನಗಳಿಂದ ಯುಎಇ ಭಾರತೀಯರ ಯುಎಇ ಪ್ರವಾಸಕ್ಕೆ ನಿರ್ಬಂಧ ಹೇರಿದೆ. ಆದರೆ ದುಬೈನಿಂದ ಎಂದಿನಂತೆ ವಿಮಾನಗಳು ಸಂಚರಿಸಲಿವೆ. ಯುಎಇ ಮಾತ್ರವಲ್ಲದೇ ಬ್ರಿಟನ್​, ಫ್ರಾನ್ಸ್, ಜರ್ಮನಿ, ನ್ಯೂಜಿಲೆಂಡ್​, ಹಾಂ​ಕಾಂಗ್​ ಹಾಗೂ ಪಾಕಿಸ್ತಾನ, ಭಾರತ ಪ್ರವಾಸಕ್ಕೆ ನಿರ್ಬಂಧ ಹೇರಿವೆ.

— India in UAE (@IndembAbuDhabi) April 25, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...