ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್ ರಾಷ್ಟ್ರ 26-04-2021 1:00PM IST / No Comments / Posted In: Featured News, International ದೇಶದಲ್ಲಿ ಕೊರೊನಾ ಕೇಸ್ಗಳು ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರುವ ಬೆನ್ನಲ್ಲೇ ಯುನೈಟೆಡ್ ಎಮಿರೇಟ್ಸ್ ನ ಬುರ್ಜ್ ಖಲೀಫಾ ಭಾರತದ ಕೊರೊನಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ವಿಶ್ವದ ಅತೀ ಎತ್ತರದ ಕಟ್ಟಡದಲ್ಲಿ ತ್ರಿವರ್ಣ ಧ್ವಜದ ಬೆಳಕು ರಾರಾಜಿಸಿದ್ದು ಮಾತ್ರವಲ್ಲದೇ ʼಸದೃಢವಾಗಿರು ಭಾರತʼ ಎಂಬ ಸಂದೇಶವನ್ನ ಭಾನುವಾರ ರಾತ್ರಿ ನೀಡಲಾಗಿದೆ. ಭಾರತವು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ, ಯುಎಇ ಭಾರತಕ್ಕೆ ಶುಭಾಶಯಗಳನ್ನ ತಿಳಿಸುತ್ತಿದೆ, ದುಬೈನ ಬುರ್ಜ್ ಖಲೀಫಾ ಪ್ರಮುಖ ಕಟ್ಟಡದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸುವ ಮೂಲಕ ನಮ್ಮ ಈ ಹೋರಾಟಕ್ಕೆ ನಮ್ಮ ಬೆಂಬಲವನ್ನ ನೀಡುತ್ತಿದ್ದೇವೆ ಎಂದು ಭಾರತದ ರಾಯಭಾರಿ ಕಚೇರಿ ಯುಎಇ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಯುಎಇ ಭಾರತದ ರಾಯಭಾರಿ ಪವನ್ ಕಪೂರ್, ಈ ಕಷ್ಟದ ಸಂದರ್ಭದಲ್ಲಿ ಭಾರತದ ಪರವಾಗಿ ಯುಎಇ ನೀಡಿದ ಬೆಂಬಲವನ್ನ ನಾವು ಪ್ರಶಂಸಿಸುತ್ತಿದ್ದೇವೆ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ಕಳೆದ 10 ದಿನಗಳಿಂದ ಯುಎಇ ಭಾರತೀಯರ ಯುಎಇ ಪ್ರವಾಸಕ್ಕೆ ನಿರ್ಬಂಧ ಹೇರಿದೆ. ಆದರೆ ದುಬೈನಿಂದ ಎಂದಿನಂತೆ ವಿಮಾನಗಳು ಸಂಚರಿಸಲಿವೆ. ಯುಎಇ ಮಾತ್ರವಲ್ಲದೇ ಬ್ರಿಟನ್, ಫ್ರಾನ್ಸ್, ಜರ್ಮನಿ, ನ್ಯೂಜಿಲೆಂಡ್, ಹಾಂಕಾಂಗ್ ಹಾಗೂ ಪಾಕಿಸ್ತಾನ, ಭಾರತ ಪ್ರವಾಸಕ್ಕೆ ನಿರ್ಬಂಧ ಹೇರಿವೆ. ⭐️As #India battles the gruesome war against #COVID19 , its friend #UAE sends its best wishes 🌟 @BurjKhalifa in #Dubai lits up in 🇮🇳 to showcase its support#IndiaUAEDosti @MEAIndia @cgidubai @AmbKapoor @MoFAICUAE @IndianDiplomacy @DrSJaishankar @narendramodi pic.twitter.com/9OFERnLDL4 — India in UAE (@IndembAbuDhabi) April 25, 2021