ಅಮೆರಿಕದ ಖ್ಯಾತ ಕಾಫಿ ಮಳಿಗೆ ಸ್ಟಾರ್ಬಕ್ಸ್ ಭಾರತದಲ್ಲೂ ಕೂಡ ತನ್ನ ಛಾಪನ್ನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಬೇಡಿಕೆಯಂತೆಯೇ ಕಾಫಿಯನ್ನ ತಯಾರಿಸುವ ಈ ಶ್ರೀಮಂತ ಕಾಫಿ ಮಳಿಗೆ ಯುವಜನತೆಯ ಪಾಲಿಗೆ ಹಾಟ್ ಫೇವರಿಟ್ ಸ್ಥಳ.
ಇತ್ತೀಚಿಗೆ ಸ್ಟಾರ್ಬಕ್ಸ್ನ ಸಿಬ್ಬಂದಿಯೊಬ್ಬರು ಗ್ರಾಹಕರೊಬ್ಬರ ಅತೀ ವಿಚಿತ್ರ ಕಾಫಿ ಆರ್ಡರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ಟಾರ್ಬಕ್ಸ್ಗೆ ಬರುವ ಗ್ರಾಹಕರು ಸಾಮಾನ್ಯವಾಗಿ ಸರಳವಾದ ಬ್ಲಾಕ್ ಫಿಲ್ಟರ್ ಕಾಫಿಯನ್ನ ಆರ್ಡರ್ ಮಾಡುತ್ತಾರೆ. ಇನ್ನು ಕೆಲವರು ಕ್ರೀಮ್ ಇರುವ ಅಥವಾ ಶುಗರ್ ಸಿರಪ್ ಹಾಕಿದ ಕಾಫಿಗಳನ್ನ ಆರ್ಡರ್ ಮಾಡಬಹುದು. ಆದರೆ ಸ್ಟಾರ್ ಬಕ್ಸ್ ಸಿಬ್ಬಂದಿ ಬ್ಯಾರಿಸ್ತಾ ಜೋಸಿ ಶೇರ್ ಮಾಡಿದ ಫೋಟೋದಲ್ಲಿ ಗ್ರಾಹಕ 13 ಬಗೆಯ ಬೇಡಿಕೆಯನ್ನ ಇಟ್ಟಿದ್ದಾನೆ.
ಈ ಕಾಫಿ ಕಪ್ನ ಫೋಟೋ ಶೇರ್ ಮಾಡಿರುವ ಜೋಸಿ, ನಾನು ಯಾಕೆ ಕೆಲಸ ಬಿಡಬೇಕು ಅನ್ನೋದಕ್ಕೆ ಇದೂ ಒಂದು ಕಾರಣ ಎಂಬರ್ಥದಲ್ಲಿ ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.