ಜರ್ಮನಿಯಲ್ಲಿ ಮೊದಲ ಹಂತದ ಲಾಕ್ಡೌನ್ ಜಾರಿ ಮಾಡಿದ್ದ ವೇಳೆ ಈ ಸಮಯವನ್ನ ಸದುಪಯೋಗಪಡಿಸಲು ನಿರ್ಧರಿಸಿದ ಸಹೋದರಿಯರು ಕೊರೊನಾ ವೈರಸ್ ಎಂಬ ಹೆಸರಿನ ಬೋರ್ಡ್ ಗೇಮ್ ಒಂದನ್ನ ಕಂಡು ಹಿಡಿದಿದ್ದಾರೆ. ಈ ಗೇಮಿಂಗ್ ಪರಿಕರಗಳು ಇದೀಗ ಮಾರುಕಟ್ಟೆಗಳಲ್ಲೂ ಲಭ್ಯವಿದೆ.
ಕೊರೊನಾ ಗೇಮ್ ನಾಲ್ವರು ಸೇರಿ ಆಡುವಂತಹ ಆಟವಾಗಿದೆ. ಇದರಲ್ಲಿ ಆಟಗಾರರು ಕಾರ್ಡ್ಗಳನ್ನ ಸಂಗ್ರಹಿಸ್ತಾರೆ ಹಾಗೂ ವಿನಿಮಯ ಮಾಡಿಕೊಳ್ತಾರೆ. ದಾರಿಯುದ್ದಕ್ಕೂ ಬರುವ ಅಡಚಣೆಗಳು, ಕ್ವಾರಂಟೈನ್ ಶಿಕ್ಷೆ ಇವೆಲ್ಲವನ್ನೂ ದಾಟಿ ಯಾರು ಮೊದಲು ಗುರಿ ಮುಟ್ಟುತ್ತಾರೋ ಅವರೇ ಕೊರೊನಾ ವೈರಸ್ ಗೇಮ್ ವಿನ್ನರ್.
ಒಗ್ಗಟ್ಟಿನಿಂದ ಕೊರೊನಾ ಗೆಲ್ಲಬಹುದು ಎಂಬ ಸಾರಾಂಶವನ್ನ ಇಟ್ಟುಕೊಂಡು ಈ ಗೇಮ್ನ್ನ ನಿರ್ಮಾಣ ಮಾಡಿದ್ದೇವೆ ಅಂತಾ 20 ವರ್ಷದ ಸಾರಾ ಎಂಬವರು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಹೇಳಿದ್ರು.