ಪತಂಗಗಳು ಎಂದಾಕ್ಷಣ ನಿಮಗೆ ಅವು ಹಾರಾಡೋದು ಥಟ್ ಅಂತಾ ನೆನಪಿಗೆ ಬರುತ್ತೆ. ಆದರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ದೊಡ್ಡ ಪತಂಗವೊಂದು ಪತ್ತೆಯಾಗಿದೆ.
ಇದು ಎಷ್ಟು ದೊಡ್ಡದಿದೆ ಅಂದರೆ ಅದರ ಭಾರದಿಂದ ಪತಂಗಕ್ಕೆ ಹಾರಾಡೋದೇ ಕಷ್ಟವಾಗಿದೆ. ಹೊಸ ಶಾಲಾ ಕಟ್ಟಡವನ್ನ ನಿರ್ಮಾಣ ಮಾಡುತ್ತಿದ್ದ ವೇಳೆ ಕಟ್ಟಡ ನಿರ್ಮಾಣಕಾರರು ಈ ಪತಂಗವನ್ನ ಗುರುತಿಸಿದ್ದಾರೆ. ಕ್ವೀನ್ಸ್ಲ್ಯಾಂಡ್ನ ಮೌಂಟ್ ಕಾಟನ್ ರಾಜ್ಯ ಶಾಲೆಯಲ್ಲಿ ಈ ದೈತ್ಯ ಪತಂಗ ಪತ್ತೆಯಾಗಿದೆ. ಈ ಪತಂಗವು ಒಂದು ಹೆಗ್ಗಣದಷ್ಟು ಗಾತ್ರವನ್ನ ಹೊಂದಿದೆ ಎನ್ನಲಾಗಿದೆ.
ನಮ್ಮ ಶಾಲೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯದ ವೇಳೆಯಲ್ಲಿ ನಮಗೆ ಈ ದೈತ್ಯ ಪತಂಗ ಕಾಣಿಸಿಕೊಂಡಿದೆ. ಇಂತಹ ಪತಂಗವನ್ನ ನಾವು ಹಿಂದೆಂದೂ ಕಂಡಿರಲೇ ಇಲ್ಲ ಎಂದು ಶಾಲೆಯ ಪ್ರಾಂಶುಪಾಲೆ ಹೇಳಿದ್ದಾರೆ.
ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಮ್ಗೆ ಕೊರೊನಾ ಸೋಂಕು ದೃಢ
ಶಾಲೆಯ ಆಡಳಿತ ಮಂಡಳಿಯು ಫೇಸ್ಬುಕ್ನಲ್ಲಿ ಈ ದೈತ್ಯ ಪತಂಗದ ಫೋಟೋವನ್ನ ಶೇರ್ ಮಾಡಿದೆ. ಈ ಫೋಟೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಎಂಡೊಕ್ಸೈಲಾ ಸಿನೆರಸ್ ಎಂಬ ಹೆಸರಿನ ದೈತ್ಯ ಪತಂಗವು ಹಾರಾಡೋದು ತುಂಬಾನೇ ಕಡಿಮೆ. ಹಾರಾಡಿದ್ದರೂ ಇವಕ್ಕೆ ಸಾಕಷ್ಟು ದೂರ ಕ್ರಮಿಸೋಕೆ ಸಾಧ್ಯವಾಗೋದಿಲ್ಲ. ಹೆಣ್ಣು ಪತಂಗಗಳು ಮರ ಹಾಗೂ ಬೇಲಿ ಬದಿಯಲ್ಲಿ ಕುಳಿತುಕೊಂಡು ಗಂಡು ಪತಂಗಗಳಿಗಾಗಿ ಹುಡುಕಾಟ ನಡೆಸುತ್ತವಂತೆ.
https://www.facebook.com/MountCottonSS/photos/a.387735271623543/1292019867861741/?type=3