
ಸಣ್ಣ ವಿಡಿಯೋದಲ್ಲಿ ಇಬ್ಬರು ಬಾಲಕರು ಮುಖಾಮುಖಿಯಾಗಿ ನಿಂತುಕೊಂಡಿರ್ತಾರೆ, ಅದರಲ್ಲಿ ಒಬ್ಬ ಮತ್ತೊಬ್ಬನ ಬಳಿ ನೀನು ಈಗ ಸರಿಯಾಗಿದ್ದಿ ಅಲ್ವಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಬೇಸರದಲ್ಲಿದ್ದ ಆ ಬಾಲಕ ಹು….ಎಂದು ಹೇಳುತ್ತಾನೆ. ಆದರೂ ಆತನ ಧ್ವನಿಯಲ್ಲಿ ಬೇಸರ ಇರೋದು ಕಾಣುತ್ತದೆ. ಆ ಬಳಿಕ ಮತ್ತೊಬ್ಬ ಬಾಲಕ ನಿನಗೆ ಆಲಿಂಗನ ಬೇಕೆ..? ಎಂದು ಪ್ರಶ್ನೆ ಮಾಡಿ ಆತನನ್ನ ತಬ್ಬಿಕೊಳ್ತಾನೆ.
ಮುಖ, ಕೈ ಕಸಿ ನಂತ್ರ ನಗುವುದನ್ನು ಕಲಿತ ಯುವಕ….!
ಈ ವಿಡಿಯೋವನ್ನ ಟಿಕ್ ಟಾಕ್ನಲ್ಲಿ ಶೇರ್ ಮಾಡಲಾಗಿದ್ದು ಒಮ್ಮೊಮ್ಮೆ ಆಲಿಂಗನ ಬೇಕು ಎನಿಸುತ್ತೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಪುಟಾಣಿ ಬಾಲಕರ ಪರಿಶುದ್ಧ ಸ್ನೇಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.