
ಕೊರೊನಾ ವೈರಸ್ನಿಂದಾಗಿ 3 ಲಕ್ಷದಷ್ಟು ಮಂದಿ ಅಮೆರಿಕದಲ್ಲಿ ಸಾವಿಗೀಡಾಗಿದ್ದಾರೆ. ಕೋವಿಡ್ 19ನಿಂದ ಅತಿ ಹೆಚ್ಚು ಪರಿಣಾಮ ಅನುಭವಿಸಿರುವ ಅಮೆರಿಕ ಇದೀಗ ಈ ಸಂಕಷ್ಟದಿಂದ ಪಾರಾಗಲು ಫೈಜರ್ ಅಸ್ತ್ರವನ್ನ ಉಪಯೋಗಿಸುತ್ತಿದೆ.
ಇತ್ತ ಸಿಂಗಾಪುರ ಕೂಡ ಫೈಜರ್ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಿದೆ. ಫೈಜರ್ ಲಸಿಕೆಯ ಆಮದಿಗಾಗಿ ಕಾಯುತ್ತಿರುವ ಸಿಂಗಾಪುರ ಡಿಸೆಂಬರ್ ಅಂತ್ಯದೊಳಗೆ ಚಿಕಿತ್ಸೆಗೆ ಬಳಕೆಯಾಗಲಿದೆ.
ಆದರೆ ಅಚ್ಚರಿಯ ವಿಚಾರ ಏನು ಅಂದರೆ ಫೈಜರ್ ಕಂಪನಿಯ ಸಿಇಒ ಆಲ್ಬರ್ಟ್ ಬೌರ್ಲಾಗೆ ಫೈಜರ್ ಲಸಿಕೆ ಇನ್ನೂ ಸಿಕ್ಕಿಲ್ಲವಂತೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆಲ್ಬರ್ಟ್ ಆದ್ಯತೆಯ ಆಧಾರದ ಮೇಲೆ ಫೈಜರ್ ಲಸಿಕೆಯನ್ನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಕಂಪನಿಯ ಯಾವುದೇ ಸಿಬ್ಬಂದಿ ಈ ಸರಪಳಿಯನ್ನ ತುಂಡು ಮಾಡೋಕೆ ಬಯಸೋದಿಲ್ಲ ಎಂದು ಹೇಳಿದ್ದಾರೆ.
https://twitter.com/curelibrary/status/1339013522773004288
https://twitter.com/MabhidaMartins/status/1338540481739943944