ಸೂರ್ಯನಿಗೆ ಅತ್ಯಂತ ಹತ್ತಿರದಿಂದ ತೆಗೆದಿರುವ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಈ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದ ಕೂಡಲೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಈ ಚಿತ್ರವನ್ನು ಸೂರ್ಯನಿಂದ 4.8 ಕೋಟಿ ಕಿಮೀ ದೂರದಿಂದ ಕ್ಲಿಕ್ ಮಾಡಲಾಗಿದೆ. ನಾಸಾ ಹಾಗೂ ಯೂರೋಪಿಯನ್ ಬಾಹ್ಯಾಕಾಶ ಏಜೆನ್ಸಿಗಳ ಜಂಟಿ ಸಹಯೋಗದಲ್ಲಿ ಸೂರ್ಯನ ಸುತ್ತ ಗಿರಕಿ ಹೊಡೆಯುವ ಆರ್ಬಿಟರ್‌ನಿಂದ ಈ ಫೋಟೋ ತೆಗೆದುಕೊಳ್ಳಲಾಗಿದೆ.
ಇಡಿಯ ಸೌರಮಂಡಲದಲ್ಲಿನ ವಾತಾವರಣವನ್ನು ಸೂರ್ಯನ ತಾಪಮಾನ ಹೇಗೆ ನಿಯಂತ್ರಿಸುತ್ತದೆ ಎಂದು ಅರಿಯಲು ವಿಜ್ಞಾನಿಗಳಿಗೆ ಈ ಚಿತ್ರಗಳು ನೆರವಾಗಲಿವೆ.