alex Certify ಮ್ಯಾರಾಥಾನ್ ಮೂಲಕ‌ ಮ್ಯಾಪ್ ನಲ್ಲಿ “ಬೋಸ್ಟನ್ ಸ್ಟ್ರಾಗ್” ಎಂದು ಬರೆದ‌ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾರಾಥಾನ್ ಮೂಲಕ‌ ಮ್ಯಾಪ್ ನಲ್ಲಿ “ಬೋಸ್ಟನ್ ಸ್ಟ್ರಾಗ್” ಎಂದು ಬರೆದ‌ ನರ್ಸ್

ಬೋಸ್ಟನ್: ಏಕಾಂಗಿಯಾಗಿ ಮ್ಯಾರಥಾನ್ ಮಾಡುವ ಮೂಲಕ ಗೂಗಲ್ ಮ್ಯಾಪ್ ನಲ್ಲಿ ನರ್ಸ್ ಒಬ್ಬಳು “ಬೋಸ್ಟನ್ ಸ್ಟ್ರಾಂಗ್ ಎಂದು ಬರೆಯಲೆತ್ನಿಸಿದ್ದಾಳೆ.
ಆದರೆ, ದುರದೃಷ್ಟವಶಾತ್ ಅಕ್ಷರವೊಂದು ಬಿಟ್ಟು ಹೋಗಿ ಆಕೆ ಮಾಡಿದ ಜಾಗೃತಿಯ ಪ್ರಯತ್ನ ಟೀಕೆಗೆ ಗುರಿಯಾಗಿದೆ. STRONG ಶಬ್ದದಲ್ಲಿ “N” ಬಿಟ್ಟು ಹೋಗಿದ್ದು, STROG ಎಂದಾಗಿಬಿಟ್ಟಿದೆ.‌

ಲಿಂಡ್ಸೆ ಡೆವರ್ಸ್ ಎಂಬ ಮೆಸ್ಯಾಚುಸೆಟ್ ಜನರಲ್ ಆಸ್ಪತ್ರೆಯ ನರ್ಸ್ ತಮ್ಮ ಬೋಸ್ಟನ್ ಮ್ಯಾರಥಾನ್ ನಲ್ಲಿ ಭಾಗವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರು. ಇದರಿಂದ ಗೂಗಲ್ ಮ್ಯಾಪ್ ನಲ್ಲಿ ದಾಖಲಾಗುವಂತೆ ಜಿಪಿಎಸ್ ಅಳವಡಿಸಿಕೊಂಡು ಕಳೆದ ಸೋಮವಾರ ಏಕಾಂಗಿಯಾಗಿ ಬೋಸ್ಟನ್ ಸ್ಟ್ರಾಗ್ ಎಂಬ ಇಂಗ್ಲಿಷ್ ವರ್ಣ ಮಾಲೆಯ ಸ್ವರೂಪದಲ್ಲಿ 8 ನಿಮಿಷ 37 ಸೆಕೆಂಡ್ ನಲ್ಲಿ ಓಡಿ  ಮುಗಿಸಿದ್ದಾರೆ.

“ಈ ಒತ್ತಡದ ಸನ್ನಿವೇಶದಲ್ಲಿ ಹಲವರು ಇದನ್ನು ನೋಡಿ ಖುಷಿಪಡುತ್ತಾರೆ. ಹಲವರಿಗೆ ಸ್ಪೂರ್ತಿಯಾಗುತ್ತದೆ ಎಂದು ನಾನು ತಿಳಿದಿದ್ದೇನೆ” ಎಂದು ಡೆವರ್ಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...