ಕೊರೊನಾ ಬಾಧೆಯಿಂದ ಈಗ ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತು. ಜನ ಈಗ ಕೋವಿಡ್-19 ಸೋಂಕನ್ನೂ ಸಹ ಹಾಸ್ಯದ ವಸ್ತುವನ್ನಾಗಿ ತೆಗೆದುಕೊಂಡುಬಿಟ್ಟಿದ್ದಾರೆ.
2020ರಲ್ಲಿ ಅದಾಗಲೇ ಸಾಕಷ್ಟು ವಂಗ್ಯಭರಿತ ಸನ್ನಿವೇಶಗಳನ್ನು ನೋಡಿದ್ದೇವೆ ಎಂದು ನೀವು ಭಾವಿಸಿದ್ದರೆ, ಇಗೋ ಇಲ್ಲೊಬ್ಬ ಭೂಪನ ಪ್ರಹಸನವನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಿ.
ಬ್ರಿಟನ್ನ ಬಾತ್ ಎಂಬ ಊರಿನಲ್ಲಿರುವ ರಾಯಲ್ ವಿಕ್ಟೋರಿಯಾ ಉದ್ಯಾನದಲ್ಲಿ ತನ್ನ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದ ವ್ಯಕ್ತಿಯೊಬ್ಬ, ಅಲ್ಲಿದ್ದ 60 ಅಡಿ ಎತ್ತರದ ಮರವೊಂದನ್ನು ಹತ್ತಿ ಕುಳಿತು, ಸ್ಯಾಂಡ್ವಿಚ್ ಮೆಲ್ಲುತ್ತಿರುವ ಚಿತ್ರವನ್ನು ಕಾಣಬಹುದಾಗಿದೆ. ಈ ಘಟನೆಯನ್ನು ಡಾಯ್ ಬಾರೋ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಅದಕ್ಕೆ, “Social distancing at its finest!” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
https://www.facebook.com/dai.barrow/videos/10219966017555513/?t=2