ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬರೆದಿದ್ದಾರೆ.
ಕಾರಿನ ಯಜಮಾನಿ ಹೆಬ್ಬಾವು ಚಕ್ರದೊಳಗೆ ಸಿಲುಕಿದ್ದನ್ನು ಕಂಡಿದ್ದು, ಕೂಡಲೇ ಆಕೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆ ಸಮಯದಲ್ಲಿ ಹೆಬ್ಬಾವು ಹೊರಬರಲು ಆಗದೇ ಒದ್ದಾಡುತ್ತಿತ್ತು. ಜಾಗಕ್ಕೆ ಬಂದ ಪೊಲೀಸರು ಹೆಬ್ಬಾವನ್ನು ರಕ್ಷಿಸಿದ್ದಾರೆ.
ಸದ್ಯಕ್ಕೆ ಆ ಹಾವನ್ನು ಪ್ರಾಣಿ ದಯಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.
https://www.facebook.com/RoswellPoliceSS/posts/2784095425052660