alex Certify ಜೀರ್ಣಕ್ರಿಯೆ ಸಂಬಂಧಿ ಕಾಯಿಲೆ ಪತ್ತೆ ಹಚ್ಚುತ್ತೆ ʼಸ್ಮಾರ್ಟ್​ ಟಾಯ್ಲೆಟ್ʼ​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆ ಸಂಬಂಧಿ ಕಾಯಿಲೆ ಪತ್ತೆ ಹಚ್ಚುತ್ತೆ ʼಸ್ಮಾರ್ಟ್​ ಟಾಯ್ಲೆಟ್ʼ​​

ದೀರ್ಘಕಾಲದ ಜಠರ ಸಂಬಂಧಿ ಬಳಲುತ್ತಿರುವವರ ಮಲವನ್ನ ಪರೀಕ್ಷೆ ಮಾಡುವ ಸಲುವಾಗಿ ಸ್ಮಾರ್ಟ್​ ಟಾಯ್ಲೆಟ್​ ಒಂದು ಸಿದ್ಧವಾಗಿದೆ. ಟಾಯ್ಲೆಟ್​​ಗಳಿಗೆ ಅಳವಡಿಸಲು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್ ಎಂಬ ವಿಶೇಷ ಸಾಧನವನ್ನ ಅಭಿವೃದ್ಧಿಪಡಿಸಲಾಗುತ್ತಿದ್ದು ಇದರಲ್ಲಿ ಮಲದ ಪರೀಕ್ಷೆ ನಡೆಸಿ ಯಾವ ಚಿಕಿತ್ಸೆಯನ್ನ ರೋಗಿಗೆ ನೀಡಬಹುದು ಎಂದು ನಿರ್ಧರಿಸಬಹುದಾಗಿದೆ.

ಹೊಸ ತಂತ್ರಜ್ಞಾನದಿಂದಾಗಿ ಕರುಳಿನ ಕಾಯಿಲೆ, ಜಠರದ ಸಮಸ್ಯೆ ಸೇರಿದಂತೆ ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳಿಗೆ ಸಹಾಯವಾಗಲಿದೆ. ಜೀರ್ಣಕ್ರಿಯೆ ಸಂಬಂಧಿ ಕಾಯಿಲೆ ವಾರ -2021ರಲ್ಲಿ ಪ್ರಸ್ತುತಿಗಾಗಿ ಆಯ್ಕೆ ಮಾಡಿದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.

ಹಳದಿ ಹಲ್ಲಿಗೆ ಈ ಮನೆ ಮದ್ದು ಬಳಸಿ ಹೇಳಿ ʼಗುಡ್‌ ಬೈʼ

ರೋಗಿಗಳಿಗೆ ಅವರ ಮಲ ಯಾವ ಸ್ಥಿತಿಯಲ್ಲಿದೆ ಎಂದೆಲ್ಲ ನೆನಪಿಟ್ಟುಕೊಳ್ಳಲು ಸಾಧ್ಯವಾಗದೇ ಇರಬಹುದು. ಅಥವಾ ವೈದ್ಯರ ಬಳಿಯಲ್ಲಿ ಸರಿಯಾಗಿ ವಿಶ್ಲೇಷಣೆ ಮಾಡಲು ಆಗದೇ ಇರಬಹುದು. ಈ ಎಲ್ಲಾ ಸಂದರ್ಭಗಳಲ್ಲಿ ಈ ವಿಶೇಷ ಸಾಧನವು ಮಲದ ಪರೀಕ್ಷೆಯನ್ನ ಮಾಡಲಿದೆ ಎಂದು ಅಮೆರಿಕದ ಡ್ಯೂಕ್​ ಯೂನಿವರ್ಸಿಟಿ ಹೇಳಿದೆ.

ʼಲಸಿಕಾ ಕೇಂದ್ರʼವಾಗಿ ಬದಲಾಯ್ತು ಮೋಜುಮಸ್ತಿಯ ತಾಣ

ದೀರ್ಘಕಾಲದ ಜಠರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಸರಿಯಾದ ಪರೀಕ್ಷೆಯನ್ನ ಮಾಡಲು ಈ ಸ್ಮಾರ್ಟ್ ಟಾಯ್ಲೆಟ್​ ಸಹಕಾರಿಯಾಗಲಿದೆ ಎಂದು ಡ್ಯೂಕ್​ ಯೂನಿವರ್ಸಿಟಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...