ದೀರ್ಘಕಾಲದ ಜಠರ ಸಂಬಂಧಿ ಬಳಲುತ್ತಿರುವವರ ಮಲವನ್ನ ಪರೀಕ್ಷೆ ಮಾಡುವ ಸಲುವಾಗಿ ಸ್ಮಾರ್ಟ್ ಟಾಯ್ಲೆಟ್ ಒಂದು ಸಿದ್ಧವಾಗಿದೆ. ಟಾಯ್ಲೆಟ್ಗಳಿಗೆ ಅಳವಡಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ವಿಶೇಷ ಸಾಧನವನ್ನ ಅಭಿವೃದ್ಧಿಪಡಿಸಲಾಗುತ್ತಿದ್ದು ಇದರಲ್ಲಿ ಮಲದ ಪರೀಕ್ಷೆ ನಡೆಸಿ ಯಾವ ಚಿಕಿತ್ಸೆಯನ್ನ ರೋಗಿಗೆ ನೀಡಬಹುದು ಎಂದು ನಿರ್ಧರಿಸಬಹುದಾಗಿದೆ.
ಹೊಸ ತಂತ್ರಜ್ಞಾನದಿಂದಾಗಿ ಕರುಳಿನ ಕಾಯಿಲೆ, ಜಠರದ ಸಮಸ್ಯೆ ಸೇರಿದಂತೆ ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳಿಗೆ ಸಹಾಯವಾಗಲಿದೆ. ಜೀರ್ಣಕ್ರಿಯೆ ಸಂಬಂಧಿ ಕಾಯಿಲೆ ವಾರ -2021ರಲ್ಲಿ ಪ್ರಸ್ತುತಿಗಾಗಿ ಆಯ್ಕೆ ಮಾಡಿದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.
ಹಳದಿ ಹಲ್ಲಿಗೆ ಈ ಮನೆ ಮದ್ದು ಬಳಸಿ ಹೇಳಿ ʼಗುಡ್ ಬೈʼ
ರೋಗಿಗಳಿಗೆ ಅವರ ಮಲ ಯಾವ ಸ್ಥಿತಿಯಲ್ಲಿದೆ ಎಂದೆಲ್ಲ ನೆನಪಿಟ್ಟುಕೊಳ್ಳಲು ಸಾಧ್ಯವಾಗದೇ ಇರಬಹುದು. ಅಥವಾ ವೈದ್ಯರ ಬಳಿಯಲ್ಲಿ ಸರಿಯಾಗಿ ವಿಶ್ಲೇಷಣೆ ಮಾಡಲು ಆಗದೇ ಇರಬಹುದು. ಈ ಎಲ್ಲಾ ಸಂದರ್ಭಗಳಲ್ಲಿ ಈ ವಿಶೇಷ ಸಾಧನವು ಮಲದ ಪರೀಕ್ಷೆಯನ್ನ ಮಾಡಲಿದೆ ಎಂದು ಅಮೆರಿಕದ ಡ್ಯೂಕ್ ಯೂನಿವರ್ಸಿಟಿ ಹೇಳಿದೆ.
ʼಲಸಿಕಾ ಕೇಂದ್ರʼವಾಗಿ ಬದಲಾಯ್ತು ಮೋಜುಮಸ್ತಿಯ ತಾಣ
ದೀರ್ಘಕಾಲದ ಜಠರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಸರಿಯಾದ ಪರೀಕ್ಷೆಯನ್ನ ಮಾಡಲು ಈ ಸ್ಮಾರ್ಟ್ ಟಾಯ್ಲೆಟ್ ಸಹಕಾರಿಯಾಗಲಿದೆ ಎಂದು ಡ್ಯೂಕ್ ಯೂನಿವರ್ಸಿಟಿ ಹೇಳಿದೆ.