alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಆನೆಯನ್ನು ಹೆದರಿಸಲು ಮುಂದಾದ ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಆನೆಯನ್ನು ಹೆದರಿಸಲು ಮುಂದಾದ ಬೆಕ್ಕು

ಹೀಗೆಲ್ಲಾ ಆಗುತ್ತಿದೆಯೇ ಎನಿಸುವ ಮಟ್ಟದಲ್ಲಿ ಅಚ್ಚರಿ ಮೂಡಿಸುವ ನಿದರ್ಶನವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಮ್ಮ ತುಂಟಾಟ ಹಾಗೂ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸದ್ದಿನಲ್ಲಿರುವ ಬೆಕ್ಕುಗಳು ನೆಟ್ಟಿಗರ ಪಾಲಿನ ಡಾರ್ಲಿಂಗ್‌ಗಳು. ಅಂತರ್ಜಾಲದಲ್ಲಿ ಬೆಕ್ಕುಗಳ ಈ ಚಿನ್ನಾಟದ ಅಸಂಖ್ಯ ವಿಡಿಯೋಗಳು ಸಿಗುತ್ತವೆ.

ಥಾಯ್ಲೆಂಡ್‌ನಲ್ಲಿ ಜರುಗಿದ ಈ ಘಟನೆಯಲ್ಲಿ ಬೆಕ್ಕೊಂದು ತನ್ನ ಗಾತ್ರವನ್ನು ಮೀರಿ ಹಲವು ಪಟ್ಟು ಹೆಚ್ಚಿನ ಪರಾಕ್ರಮ ತೋರುವ ಮೂಲಕ ಭಾರೀ ವೈರಲ್ ಆಗಿದೆ.

“ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು” ಎಂಬ ನಾಣ್ಣುಡಿಯಂತೆ ಈ ಬೆಕ್ಕು ಆನೆಯನ್ನೇ ಚೇಸ್ ಮಾಡುವ ಮೂಲಕ ಭಾರೀ ಪರಾಕ್ರಮ ತೋರಿದೆ. ತನ್ನ ಮನೆಯಂಗಳದಲ್ಲಿರುವ ಗಾರ್ಡನ್‌ಗೆ ಬಂದಿದ್ದ ನಾಲ್ಕು ಟನ್‌ ತೂಕದ ಪೈ ಸಲಿಕ್ ಹೆಸರಿನ ಆನೆ ಆಹಾರ ಅರಸುತ್ತಾ ಆ ಪ್ರದೇಶದಲ್ಲಿರುವ ಉದ್ಯಾನಗಳಲ್ಲಿ ದಾಳಿ ಮಾಡುವುದರಲ್ಲಿ ನಿಸ್ಸೀಮ.

ಇಂಥ ಆನೆ ತನ್ನ ಮನೆಯಂಗಳಕ್ಕೆ ಬಂದಾಗ, ಸಿಂಬಾ ಹೆಸರಿನ ಈ ಧೈರ್ಯಶಾಲಿ ಬೆಕ್ಕು ಮುಖಾಮುಖಿ ಎದುರಾಗಿ, ಆನೆಯನ್ನು ’ಚೇಸ್’ ಮಾಡುತ್ತಿರುವ ದೃಶ್ಯಾವಳಿ ಭಾರೀ ಮಜವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...