alex Certify ಬಿಗ್‌ ನ್ಯೂಸ್: ಪ್ರಯೋಗಾಲಯದಲ್ಲಿ ತಯಾರಾಗಲಿದೆ ಕೋಳಿ ಮಾಂಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಪ್ರಯೋಗಾಲಯದಲ್ಲಿ ತಯಾರಾಗಲಿದೆ ಕೋಳಿ ಮಾಂಸ…!

ಸಿಂಗಾಪುರ ಸರ್ಕಾರ ಲ್ಯಾಬ್​ಗಳಲ್ಲಿ ತಯಾರಾದ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿದೆ. ಅಮೆರಿಕ ಮೂಲದ ಕಂಪನಿ ಲ್ಯಾಬ್​ಗಳಲ್ಲಿ ಕೋಳಿ ಮಾಂಸ ತಯಾರಿಸಲಿದೆ.

ಆರೋಗ್ಯ, ಪ್ರಾಣಿಗಳ ರಕ್ಷಣೆ ಹಾಗೂ ಪರಿಸರದ ಬಗೆಗಿನ ಗ್ರಾಹಕರ ಕಾಳಜಿಯನ್ನ ಗಮನದಲ್ಲಿಟ್ಟುಕೊಂಡು ಈ ಪ್ರಯೋಗಾಲಯಗಳಲ್ಲಿ ಮಾಂಸ ತಯಾರಿಸುವ ಪ್ಲಾನ್​​ಗೆ ಸಿಂಗಾಪುರ ಗ್ರೀನ್​ ಸಿಗ್ನಲ್​ ನೀಡಿದೆ.

ಇದು ಕೋಳಿಯನ್ನ ಹತ್ಯೆ ಮಾಡಿ ತರುವ ಮಾಂಸವಲ್ಲ. ಬದಲಾಗಿ ಕೋಳಿಗಳ ಸ್ನಾಯುಕೋಶದ ಸಹಾಯದಿಂದ ಲ್ಯಾಬ್​ನಲ್ಲೇ ಉತ್ಪಾದನೆ ಮಾಡುವ ಮಾಂಸವಾಗಿದೆ.

ಈ ಮೂಲಕ ಪ್ರಯೋಗಾಲಯದಲ್ಲಿ ತಯಾರಾದ ಮಾಂಸ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದೇಶ ಸಿಂಗಾಪುರ ಎನಿಸಿಕೊಂಡಿದೆ.

ಮಾನವರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಪ್ರಾಣಿಗಳ ಕೋಶದಿಂದಲೇ ಉತ್ತಮ ಗುಣಮಟ್ಟದ ಮಾಂಸವನ್ನ ಲ್ಯಾಬ್​ನಲ್ಲಿ ತಯಾರಿಸುವ ಕೆಲಸಕ್ಕೆ ಸಿಂಗಾಪುರ ಕೈ ಹಾಕಿದೆ. ಈ ಮೂಲಕ ಮುಂಬರುವ ದಿನಗಳಲ್ಲಿ ಸಿಂಗಾಪುರ ಸಣ್ಣ ಪ್ರಮಾಣದ ವಾಣಿಜ್ಯ ಉಡಾವಣೆಗೂ ದಾರಿ ಮಾಡಿಕೊಟ್ಟಿದೆ ಅಂತಾ ಖಾಸಗಿ ಮಾಧ್ಯಮ ವರದಿ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...