ಸಿಂಗಾಪುರ ಸರ್ಕಾರ ಲ್ಯಾಬ್ಗಳಲ್ಲಿ ತಯಾರಾದ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿದೆ. ಅಮೆರಿಕ ಮೂಲದ ಕಂಪನಿ ಲ್ಯಾಬ್ಗಳಲ್ಲಿ ಕೋಳಿ ಮಾಂಸ ತಯಾರಿಸಲಿದೆ.
ಆರೋಗ್ಯ, ಪ್ರಾಣಿಗಳ ರಕ್ಷಣೆ ಹಾಗೂ ಪರಿಸರದ ಬಗೆಗಿನ ಗ್ರಾಹಕರ ಕಾಳಜಿಯನ್ನ ಗಮನದಲ್ಲಿಟ್ಟುಕೊಂಡು ಈ ಪ್ರಯೋಗಾಲಯಗಳಲ್ಲಿ ಮಾಂಸ ತಯಾರಿಸುವ ಪ್ಲಾನ್ಗೆ ಸಿಂಗಾಪುರ ಗ್ರೀನ್ ಸಿಗ್ನಲ್ ನೀಡಿದೆ.
ಇದು ಕೋಳಿಯನ್ನ ಹತ್ಯೆ ಮಾಡಿ ತರುವ ಮಾಂಸವಲ್ಲ. ಬದಲಾಗಿ ಕೋಳಿಗಳ ಸ್ನಾಯುಕೋಶದ ಸಹಾಯದಿಂದ ಲ್ಯಾಬ್ನಲ್ಲೇ ಉತ್ಪಾದನೆ ಮಾಡುವ ಮಾಂಸವಾಗಿದೆ.
ಈ ಮೂಲಕ ಪ್ರಯೋಗಾಲಯದಲ್ಲಿ ತಯಾರಾದ ಮಾಂಸ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದೇಶ ಸಿಂಗಾಪುರ ಎನಿಸಿಕೊಂಡಿದೆ.
ಮಾನವರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಪ್ರಾಣಿಗಳ ಕೋಶದಿಂದಲೇ ಉತ್ತಮ ಗುಣಮಟ್ಟದ ಮಾಂಸವನ್ನ ಲ್ಯಾಬ್ನಲ್ಲಿ ತಯಾರಿಸುವ ಕೆಲಸಕ್ಕೆ ಸಿಂಗಾಪುರ ಕೈ ಹಾಕಿದೆ. ಈ ಮೂಲಕ ಮುಂಬರುವ ದಿನಗಳಲ್ಲಿ ಸಿಂಗಾಪುರ ಸಣ್ಣ ಪ್ರಮಾಣದ ವಾಣಿಜ್ಯ ಉಡಾವಣೆಗೂ ದಾರಿ ಮಾಡಿಕೊಟ್ಟಿದೆ ಅಂತಾ ಖಾಸಗಿ ಮಾಧ್ಯಮ ವರದಿ ಮಾಡಿದೆ.