ಲಾಕ್ಡೌನ್ನಿಂದಾಗಿ ಫ್ರೆಂಚ್ ಗಡಿಯಲ್ಲಿ ಸಿಲುಕಿರುವ ನೂರಾರು ಲಾರಿ ಚಾಲಕರಿಗೆ ಸಿಖ್ ಸಮುದಾಯ ಸಹಾಯಹಸ್ತ ಚಾಚಿದೆ.
ಫ್ರೆಂಚ್ ಗಡಿಗಳನ್ನ ಮುಚ್ಚಿರೋದ್ರಿಂದ ಕರಾವಳಿ ಭಾಗದಲ್ಲಿ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಈ ಭಾಗದಲ್ಲಿ ಯಾವುದೇ ಹೋಟೆಲ್ ಆಗಲಿ ಅಂಗಡಿಯಾಗಲಿ ಇಲ್ಲದ ಕಾರಣ ಲಾರಿ ಚಾಲಕರು ತುತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಈ ಸ್ಥಿತಿಯಲ್ಲಿರುವ ಚಾಲಕರಿಗೆ ಕೆಂಟ್ನಲ್ಲಿರುವ ಸಿಖ್ ಸಮುದಾಯ ಊಟದ ವ್ಯವಸ್ಥೆ ಮಾಡಿದೆ.
ಕ್ರಿಸ್ಮಸ್ ಅಂದರೇನೆ ಉಡುಗೊರೆಗಳನ್ನ ನೀಡುವ ಹಬ್ಬ. ಹೀಗಾಗಿ ಕೆಂಟ್ನಲ್ಲಿರುವ ಸಿಖ್ರು ಕೇವಲ ಮೂರು ಗಂಟೆ ಅವಧಿಯಲ್ಲಿ 800 ಊಟಗಳನ್ನ ಕಳಿಸಿಕೊಡುವ ಮೂಲಕ ಲಾರಿ ಚಾಲಕರ ಹಸಿವನ್ನ ನೀಗಿಸಿದ್ದಾರೆ.