ಅನಾರೋಗ್ಯ ಪೀಡಿತವಾದ ನಾಯಿಯೊಂದು ಆಕಸ್ಮಿಕವಾಗಿ ಮತ್ತು ಅಚ್ಚರಿ ರೀತಿಯಲ್ಲಿ ಪ್ರಾಣಿ ಚಿಕಿತ್ಸಾ ಕ್ಲಿನಿಕ್ ಪ್ರವೇಶಿಸಿ ತನ್ನ ಅಸಹಾಯಕತೆಯನ್ನು ವೈದ್ಯರ ಮುಂದೆ ತೋರ್ಪಡಿಸಿಕೊಂಡು ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪ್ರಾಣಿಪ್ರಿಯರ ಕರುಳು ಚುರುಕ್ ಎಂದಿದೆ. ಪ್ರಸ್ತುತ ನಾಯಿಯ ದುಬಾರಿ ಚಿಕಿತ್ಸೆಗೆ ಹಣ ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಮನುಷ್ಯರಂತೆ, ನಾಯಿಗಳಲ್ಲಿನ ಕ್ಯಾನ್ಸರ್ ಚಿಕಿತ್ಸೆಯು ಸಾಕಷ್ಟು ವೆಚ್ಚದಾಯಕವಾಗಿದೆ.
ಸಾಕುಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ, ಪಾಲಕರು ಅವನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುತ್ತಾರೆ. ಆದರೆ ಈ ಘಟನೆಯಲ್ಲಿ ಪಾಲಕರಿಲ್ಲದ ದಾರಿಹೋಕ ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿ ಸ್ವತಃ ಕ್ಲಿನಿಕ್ ಒಳಹೊಕ್ಕಿದೆ. ಹಾಗೆಯೇ ವೈದ್ಯರ ಮುಂದೆ ಅದು ಮನುಷ್ಯರಂತೆ ಚಿಕಿತ್ಸೆ ಬಯಸುವ ಭಾವನೆ ವ್ಯಕ್ತಪಡಿಸಿದೆ.
ತಡರಾತ್ರಿ ದುಡುಕಿನ ನಿರ್ಧಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ –ಸಾವಿನ ಕುರಿತು ಅನುಮಾನ
ಈ ವೇಳೆ ನಾಯಿಯಲ್ಲಿ ಬೆಳೆಯುತ್ತಿರುವ ಅಪಾಯಕಾರಿ ಗೆಡ್ಡೆಯನ್ನು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಯಿತು. ಸದ್ಯ ಕಿಮೋ ಥೆರಪಿ ನೀಡಲಾಗಿದೆ.
ಚಿಕಿತ್ಸೆ ನೀಡುತ್ತಿರುವ ಡಾ. ಸಿಲ್ವಾ, ಇನ್ನು ಮುಂದೆ ಯಾವುದೇ ರಕ್ತಸ್ರಾವ ಆಗಲ್ಲ. ಅದು ನೋವಿನಿಂದ ಬಳಲುತ್ತಿದ್ದು, ಮುಂದೆ ಎಷ್ಟು ಬಾರಿ ಕಿಮೋ ಕೊಡಬೇಕೋ ಅಥವಾ ಹೊಸ ವಿಧಾನವನ್ನು ಕಂಡುಕೊಳ್ಳುತ್ತೇವೆ ಎಂದಿದ್ದಾರೆ.
ಅಷ್ಟೇ ಅಲ್ಲದೇ ವೈದ್ಯ ರಾತ್ರಿಯಲ್ಲಿ ನಾಯಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದೀಗ ಅನೇಕ ಜನರು ನಾಯಿಯನ್ನು ದತ್ತು ಪಡೆಯಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ.