ಭಾರತವು ಕೋವಿಡ್- 19 ಮುಕ್ತಗೊಳಿಸುವ ಲಸಿಕೆಯನ್ನು ತಮ್ಮ ದೇಶಕ್ಕೆ ಕಳಿಸಿದ್ದಕ್ಕಾಗಿ ಭೂತನ್‌ನ ಪುಟ್ಟ ಬಾಲಕಿಯೊಬ್ಬಳು ಧನ್ಯವಾದ ಅರ್ಪಿಸಿದ ವಿಡಿಯೋ ನೆಟ್ಟಿಗರ ಮನಸ್ಸು ತಟ್ಟಿದೆ.
ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಿಗೆ ಲಸಿಕೆಗಳನ್ನು ಕಳುಹಿಸುವ ಭಾರತದ ಮಾನವೀಯ ಪ್ರಯತ್ನಕ್ಕೆ ಎಲ್ಲೆಡೆಯಿಂದ ಶ್ಲಾಘನೆ ಬರುತ್ತಿದೆ.
ಭೂತಾನ್‌ನಲ್ಲಿರುವ ಭಾರತೀಯ ರಾಯಭಾರಿ ರುಚಿರಾ ಕಾಂಬೊಜ್ ವಿಡಿಯೋವೊಂದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಸ್ಥಳೀಯ ಮಕ್ಕಳ ಕಲಾವಿದ ಖೆನ್ರಾಬ್ ಯೀಡ್ಜಿನ್ ಸೈಲ್ಡೆನ್ ಭಾರತಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ಸಾಹಸ ಮಾಡಲು ಹೋಗಿ ಸಾವಿನ ಕದ ತಟ್ಟಿಬಂದ ಯುವಕರು
ವೀಡಿಯೊದಲ್ಲಿ, ಪುಟಾಣಿ ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ ಮತ್ತು ದೇಶದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗುವಂತೆ ಹೆಚ್ಚು ಅಗತ್ಯವಿರುವ ಲಸಿಕೆಗಳನ್ನು ಕಳುಹಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳುತ್ತಾಳೆ. ಕೊನೆಯಲ್ಲಿ ಆಕೆ ಕೈಗಳನ್ನು ಮಡಚಿ ‘ಶುಕ್ರಿಯಾ’ ಎನ್ನುವುದು ಮನಮೋಹಕವಾಗಿದೆ.
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ವೀಡಿಯೊ ವೈರಲ್ ಆಗಿದೆ. ಇದು 284 ರಿಟ್ವೀಟ್ ಮತ್ತು 1332 ಲೈಕ್‌ಗಳೊಂದಿಗೆ 13,300 ವೀಕ್ಷಣೆ ಗಳಿಸಿದೆ. “ಎಂತಹ ಸುಂದರವಾದ ಧನ್ಯವಾದ” ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ತಮಾಷೆಯಾಗಿ, “ನಾವು ಆಕೆಯನ್ನು ಉಳಿಸಿಕೊಳ್ಳಬಹುದೇ?” ಎಂದು ಪ್ರಶ್ನಿಸಿದ್ದಾರೆ.