ಕೊರೊನಾ ವಿರುದ್ಧ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳೂ ಲಸಿಕೆ ಅಭಿಯಾನ ಶುರು ಮಾಡಿಕೊಂಡಿದ್ರೂ ಸಹ ಮಾಸ್ಕ್ ಬಳಕೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕಳೆದ ಒಂದು ವರ್ಷದಿಂದ ಮಾಸ್ಕ್ ಬಳಕೆ ಮಾಡಲಾಗುತ್ತಿದೆಯಾದರೂ ಕೆಲವರಿಗೆ ಮನೆಯಿಂದ ಹೊರಹೋಗುವಾಗ ಮಾಸ್ಕ್ ಕೊಂಡೊಯ್ಯೋದನ್ನೇ ಮರೆತುಬಿಡ್ತಾರೆ.
ಇದೇ ರೀತಿ ಸೂಪರ್ ಮಾರ್ಕೆಟ್ಗೆ ಯುವತಿಯೊಬ್ಬಳು ಮಾಸ್ಕ್ ಮರೆತು ತೆರಳಿದ್ದಳು. ಸೂಪರ್ ಮಾರ್ಕೆಟ್ ಸಿಬ್ಬಂದಿ ಆಕೆ ಬಳಿ ಮಾಸ್ಕ್ ಧರಿಸದ ಬಗ್ಗೆ ಕೇಳುತ್ತಿದ್ದಂತೆಯೇ ಆಕೆ ಕೂಡಲೇ ತಾನು ಧರಿಸಿದ್ದ ಒಳ ಉಡುಪನ್ನ ಕಳಚಿ ಮುಖಕ್ಕೆ ಹಾಕಿಕೊಂಡಿದ್ದಾಳೆ. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್ ಯುವತಿಯ ಬಳಿ ಬಂದು ಫೇಸ್ ಮಾಸ್ಕ್ ಬಗ್ಗೆ ವಿಚಾರಿಸುತ್ತಿರೋದನ್ನ ಕಾಣಬಹುದಾಗಿದೆ. ಕೋವಿಡ್ 19 ಮಾರ್ಗಸೂಚಿಗಳನ್ನ ಪಾಲಿಸದೇ ಹೋದಲ್ಲಿ ಅಂಗಡಿ ಒಳಕ್ಕೆ ಬಿಡೋದಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಯುವತಿಗೆ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಲ್ಲರ ಸಮ್ಮುಖದಲ್ಲೇ ಅಂಡರ್ ವೇರ್ ಕಳಚಿದ ಯುವತಿ ಅದನ್ನ ಮಾಸ್ಕ್ನಂತೆ ಮುಖಕ್ಕೆ ಕಟ್ಟಿಕೊಂಡಿದ್ದಾಳೆ.
ಇದನ್ನ ನೋಡಿದ ಅನೇಕರು ಏನು ನಡೀತಾ ಇದೆ ಇಲ್ಲಿ..? ಅಯ್ಯೋ ದೇವರೆ ಎಂದು ಹೇಳುತ್ತಿರೋದನ್ನ ವಿಡಿಯೋದಲ್ಲಿ ಕೇಳಬಹುದಾಗಿದೆ. ಇನ್ನು ಈ ಘಟನೆಗೆ ಸಾಕ್ಷಿಯಾದ ಇನ್ನೊಂದು ಮಹಿಳೆ, ಆಕೆ ಮಾಡಿದ್ದನ್ನ ನಾನು ಸ್ವಾಗತಿಸುತ್ತೇನೆ. ಒಳ ಉಡುಪಿಗಿಂತ ಜಾಸ್ತಿ ಬ್ಯಾಕ್ಟೀರಿಯಾ ಫೇಸ್ ಮಾಸ್ಕ್ಗಳ ಮೇಲೆಯೇ ಇರುತ್ತೆ. ಹೀಗಾಗಿ ಆಕೆ ಉತ್ತಮ ಕೆಲಸವನ್ನೇ ಮಾಡಿದ್ದಾಳೆ ಎಂದು ಹೇಳಿದ್ದಾರೆ.
https://twitter.com/i/status/1364253718904979462