alex Certify ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ ಮಾಸ್ಕ್​ ಮಾಡಿಕೊಂಡ ಯುವತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ ಮಾಸ್ಕ್​ ಮಾಡಿಕೊಂಡ ಯುವತಿ…..!

ಕೊರೊನಾ ವಿರುದ್ಧ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳೂ ಲಸಿಕೆ ಅಭಿಯಾನ ಶುರು ಮಾಡಿಕೊಂಡಿದ್ರೂ ಸಹ ಮಾಸ್ಕ್​ ಬಳಕೆಗೆ ಇನ್ನೂ ಬ್ರೇಕ್​ ಬಿದ್ದಿಲ್ಲ. ಕಳೆದ ಒಂದು ವರ್ಷದಿಂದ ಮಾಸ್ಕ್​ ಬಳಕೆ ಮಾಡಲಾಗುತ್ತಿದೆಯಾದರೂ ಕೆಲವರಿಗೆ ಮನೆಯಿಂದ ಹೊರಹೋಗುವಾಗ ಮಾಸ್ಕ್​ ಕೊಂಡೊಯ್ಯೋದನ್ನೇ ಮರೆತುಬಿಡ್ತಾರೆ.

ಇದೇ ರೀತಿ ಸೂಪರ್ ಮಾರ್ಕೆಟ್​ಗೆ ಯುವತಿಯೊಬ್ಬಳು ಮಾಸ್ಕ್​ ಮರೆತು ತೆರಳಿದ್ದಳು. ಸೂಪರ್​ ಮಾರ್ಕೆಟ್​ ಸಿಬ್ಬಂದಿ ಆಕೆ ಬಳಿ ಮಾಸ್ಕ್​ ಧರಿಸದ ಬಗ್ಗೆ ಕೇಳುತ್ತಿದ್ದಂತೆಯೇ ಆಕೆ ಕೂಡಲೇ ತಾನು ಧರಿಸಿದ್ದ ಒಳ ಉಡುಪನ್ನ ಕಳಚಿ ಮುಖಕ್ಕೆ ಹಾಕಿಕೊಂಡಿದ್ದಾಳೆ. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್​ ಯುವತಿಯ ಬಳಿ ಬಂದು ಫೇಸ್​ ಮಾಸ್ಕ್​ ಬಗ್ಗೆ ವಿಚಾರಿಸುತ್ತಿರೋದನ್ನ ಕಾಣಬಹುದಾಗಿದೆ. ಕೋವಿಡ್​ 19 ಮಾರ್ಗಸೂಚಿಗಳನ್ನ ಪಾಲಿಸದೇ ಹೋದಲ್ಲಿ ಅಂಗಡಿ ಒಳಕ್ಕೆ ಬಿಡೋದಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್​ ಯುವತಿಗೆ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಲ್ಲರ ಸಮ್ಮುಖದಲ್ಲೇ ಅಂಡರ್​ ವೇರ್ ಕಳಚಿದ ಯುವತಿ ಅದನ್ನ ಮಾಸ್ಕ್​ನಂತೆ ಮುಖಕ್ಕೆ ಕಟ್ಟಿಕೊಂಡಿದ್ದಾಳೆ.

ಇದನ್ನ ನೋಡಿದ ಅನೇಕರು ಏನು ನಡೀತಾ ಇದೆ ಇಲ್ಲಿ..? ಅಯ್ಯೋ ದೇವರೆ ಎಂದು ಹೇಳುತ್ತಿರೋದನ್ನ ವಿಡಿಯೋದಲ್ಲಿ ಕೇಳಬಹುದಾಗಿದೆ. ಇನ್ನು ಈ ಘಟನೆಗೆ ಸಾಕ್ಷಿಯಾದ ಇನ್ನೊಂದು ಮಹಿಳೆ, ಆಕೆ ಮಾಡಿದ್ದನ್ನ ನಾನು ಸ್ವಾಗತಿಸುತ್ತೇನೆ. ಒಳ ಉಡುಪಿಗಿಂತ ಜಾಸ್ತಿ ಬ್ಯಾಕ್ಟೀರಿಯಾ ಫೇಸ್​ ಮಾಸ್ಕ್​​ಗಳ ಮೇಲೆಯೇ ಇರುತ್ತೆ. ಹೀಗಾಗಿ ಆಕೆ ಉತ್ತಮ ಕೆಲಸವನ್ನೇ ಮಾಡಿದ್ದಾಳೆ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...