ವನ್ಯ ಜೀವಿಗಳಿಗೆ ಅವುಗಳದ್ದೇ ಆದ ಸ್ಪೇಸ್ ಕೊಡುವುದು ಹಾಗೂ ಅವುಗಳ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಫಾರಿಗೆ ಅಂತ ಹೋದಾಗ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿಗಳಿಗೆ ನಾವು ಡಿಸ್ಟರ್ಬ್ ಆದರೆ ಪರಿಣಾಮ ನೆಟ್ಟಗಿರೋದಿಲ್ಲ.
ದಕ್ಷಿಣ ಡಕೋಟಾದ 54 ವರ್ಷದ ಮಹಿಳೆಯೊಬ್ಬರು ಇಲ್ಲಿನ ಕಸ್ಟರ್ ಸ್ಟೇಟ್ ಪಾರ್ಕ್‌ನಲ್ಲಿ ಸಹ ಮೋಟರ್ ಸೈಕ್ಲಿಸ್ಟ್ ಗಳೊಂದಿಗೆ ಸಂಚಾರ ಮಾಡುತ್ತಿದ್ದರು. ಆ ವೇಳೆ ಕಾಡೆಮ್ಮೆಗಳ ದೊಡ್ಡ ಹಿಂಡೊಂದು ರಸ್ತೆ ದಾಟುತ್ತಿದ್ದದ್ದನ್ನು ನೋಡಿದ್ದಾರೆ. ಈ ವೇಳೆ, ಅವುಗಳ ಫೋಟೋ ತೆಗೆಯಲೆಂದು ಮುಂದೆ ಬಂದಿದ್ದಾರೆ.
ಬೈಕ್‌ನಿಂದ ಇಳಿದ ಮಹಿಳೆ, ಕಾಡೆಮ್ಮೆಗಳ ಹಿಂಡಿನ ಮಧ್ಯೆಯೇ ನಿಂತುಕೊಂಡು ಫೋಟೋ ತೆಗೆಯಲು ಹೋಗಿದ್ದಾರೆ. ಆಗ ಸಿಟ್ಟಿಗೆದ್ದ ಕೋಣವೊಂದು ಆಕೆಯ ಪ್ಯಾಂಟ್ ನ್ನು ಕೊಂಬಿನಿಂದ ಹಿಡಿದುಕೊಂಡು ಮಹಿಳೆಯನ್ನು ಗಿರಗಿರನೇ ತಿರುಗಿಸಿಬಿಟ್ಟಿದೆ. ಅದೃಷ್ಟವಶಾತ್ ಆಕೆಗೆ ಮಾರಣಾಂತಿಕ ಗಾಯಗಳಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.