alex Certify ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ

ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ತನಗೆ ಸರ್ವಿಸ್ ಕೊಡುವುದಿಲ್ಲವೆಂದ ಊಬರ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಮಹಿಳೆಯೊಬ್ಬರು ಆತನ ಮೇಲೆ ಕೆಮ್ಮಿ, ಪೆಪ್ಪರ್‌ ಸ್ಪ್ರೇ ಹಾಕಿ ಕಿರುಕುಳ ಕೊಡಲು ಮುಂದಾದ ವಿಡಿಯೋವೊಂದು ವೈರಲ್ ಆಗಿದೆ.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ಈ ಘಟನೆಯ ಸಂದರ್ಭ ಈ ಕಿಡಿಗೇಡಿ ಪ್ರಯಾಣಿಕೆಯೊಂದಿಗೆ ಇನ್ನಿಬ್ಬರು ಮಹಿಳೆಯರೂ ಕ್ಯಾಬ್‌ನಲ್ಲಿ ಇದ್ದು, ಅವರೂ ಸಹ ಚಾಲಕನಿಗೆ ಹಿಂಸೆ ಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಬೇರೊಬ್ಬನೊಂದಿಗೆ ಸಂಬಂಧ ಬೆಳೆಸಿದ ಯುವತಿ; ಪ್ರಿಯಕರನಿಂದಲೇ ಘೋರ ಕೃತ್ಯ

ಇಲ್ಲಿನ ಬೇ ಏರಿಯಾದಿಂದ ಪ್ರಯಾಣಿಕರನ್ನು ಪಿಕ್ ಮಾಡಿಕೊಂಡು ಬರುತ್ತಿದ್ದ ಚಾಲಕ ಶುಭ್‌ಕಾರ್‌ ಖಡ್ಕಾ, ಅವರ ಮೇಲೆ ದಾಳಿ ಮಾಡಿದ ಈ ಮಹಿಳೆಯರು ಆತನ ಮಾಸ್ಕ್ ‌ಅನ್ನು ಮುಖದಿಂದ ಕಿತ್ತು ಹರಿದು ಹಾಕಿದ್ದು, ಜನಾಂಗೀಯ ನಿಂದನೆಗೂ ಮುಂದಾಗಿದ್ದಾರೆ. ಮಾಸ್ಕ್ ಧರಿಸದೇ ಇದ್ದ ಕಾರಣ ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ ಎಂದು ವಿನಂತಿಸಿಕೊಂಡ ಶುಭ್‌ಕಾರ್‌ ಮೇಲೆ ಈ ರೀತಿ ಹಲ್ಲೆ ನಡೆಸಲಾಗಿದೆ.

Women refuses to wear mask and coughs on Uber driver. Smh

Posted by Karon Coney Gittens on Tuesday, March 9, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...