ಇತ್ತೀಚಿನ ದಿನದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಮಗು ಮಾಡುವುದು ಹೇಗೆ ಎನ್ನುವ ಅರಿವು ಇರುತ್ತದೆ. ಆದರೆ ದಂಪತಿಗಳಿಗೆ ಮದುವೆಯಾದ ವರ್ಷ ಕಳೆದರೂ ಮಕ್ಕಳು ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿಯಿರಲಿಲ್ಲವಂತೆ.
ಹೌದು, ಅಚ್ಚರಿಯಾದರೂ ಇದು ಸತ್ಯ. ಈ ಅಚ್ಚರಿಯ ಮಾಹಿತಿಯನ್ನು ಮಿಡ್ ನರ್ಸ್ ರಚೆಲ್ ಹಿಯರ್‌ಸನ್, ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಈ ದಂಪತಿಗಳು ಇಂಟರ್‌ನೆಟ್ ಯುಗದ ಮೊದಲೇ ವಿವಾಹವಾಗಿದ್ದರಂತೆ. ಈ ದಂಪತಿಗಳಿಗೆ ಲೈಂಗಿಕ ಕ್ರಿಯೆಯ ಬಗ್ಗೆ ಎಳ್ಳಷ್ಟು ಗೊತ್ತಿರಲಿಲ್ಲವಂತೆ. ಮದುವೆಯಾದ ಮಾತ್ರಕ್ಕೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆಯಲ್ಲಿಯೇ ಜೀವನ ಸಾಗಿಸುತ್ತಿದ್ದರಂತೆ.
ಬಳಿಕ ವೈದ್ಯರ ಬಳಿ ಈ ದಂಪತಿಗಳು ಬಂದಾಗ, ವೈದ್ಯರು ಲೈಂಗಿಕತೆಯ ಬಗ್ಗೆ ಪ್ರಶ್ನಿಸಿದ್ದು, ಈ ಬಗ್ಗೆ ಅಚ್ಚರಿಯಿಂದ ಕೇಳಿಸಿಕೊಂಡಿದ್ದಾರೆ. ಬಳಿಕ ಈ ದಂಪತಿಯನ್ನು ರಚೆಲ್ ಬಳಿ ಆಪ್ತ ಸಮಾಲೋಚನೆಗೆ ಬಂದಾಗ, ಪುನಃ ಈ ವಿಷಯ ವಿಚಾರಿಸಿದರೂ, ಲೈಂಗಿಕತೆ ಎಂದರೆ ಏನು ಎನ್ನುವುದು ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.
ಆದರೆ ಈ ಬಗ್ಗೆ ಮಾಹಿತಿ ನೀಡಿದ ಕೆಲ ದಿನಗಳ ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. “ಹ್ಯಾಂಡಲ್ ವಿತ್ ಕೇರ್; ಕನ್ಫೆಷನ್ ಆಫ್ ಎನ್‌ಎಚ್‌ಎಸ್ ಹೆಲ್ತ್ ವಿಸಿಟರ್” ಎನ್ನುವ ಪುಸ್ತಕದಲ್ಲಿ ತಮ್ಮ ನಾಲ್ಕು ದಶಕದ ಅನುಭವವನ್ನು ಬರೆದುಕೊಂಡಿದ್ದಾರೆ. ಅದರಲ್ಲಿ ಈ ರೀತಿ ನೂರಾರು ಅಚ್ಚರಿಯ ಘಟನೆಗಳಿವೆ ಎಂದು ಹೇಳಿಕೊಂಡಿದ್ದಾರೆ.