alex Certify ಇಲ್ಲಿದೆ ದುಬಾರಿ ಮೊಬೈಲ್ ಖರೀದಿಗಾಗಿ ಕಿಡ್ನಿ ಮಾರಾಟ ಮಾಡಿದ್ದವನ ಕರುಣಾಜನಕ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ದುಬಾರಿ ಮೊಬೈಲ್ ಖರೀದಿಗಾಗಿ ಕಿಡ್ನಿ ಮಾರಾಟ ಮಾಡಿದ್ದವನ ಕರುಣಾಜನಕ ಕಥೆ

ಆಪಲ್​ ಕಂಪನಿ ಇತ್ತೀಚೆಗೆ ಐ ಫೋನ್​​ 12 ಬಿಡುಗಡೆ  ಮಾಡಿದ ಸಂದರ್ಭದಲ್ಲಿ ನೆಟ್ಟಿಗರು ತಮಾಷೆಗಳ ಸುರಿಮಳೆಯನ್ನೇ ಹರಿಸಿದ್ದರು. ಕೆಲವರು ಈ ಫೋನ್​ನ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದರೆ ಇನ್ನೂ ಹಲವರು ಇದರ ದರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ರು.

ಕೆಲವರು ಬ್ಯಾಂಕ್​ ದರೋಡೆ ಮಾಡಬೇಕಾ ಎಂದು ತಮಾಷೆ ಮಾಡಿದ್ದರೆ ಇನ್ನೂ ಹಲವರು ಕಿಡ್ನಿ ಮಾರಾಟ ಮಾಡಿ ಈ ಐಫೋನ್​ ಕೊಳ್ಳಬೇಕು ಅಂತಾ ಬರೆದುಕೊಂಡಿದ್ದರು. ಆದರೆ ಈ ಎಲ್ಲಾ ತಮಾಷೆಗಳ ನಡುವೆಯೇ ಚೀನಾದ 25 ವರ್ಷದ ವ್ಯಕ್ತಿಯೊಬ್ಬ ಐಫೋನ್​ ಖರೀದಿ ಮಾಡಲು ನಿಜವಾಗಿಯೂ ತನ್ನ ಒಂದು ಕಿಡ್ನಿಯನ್ನ ಮಾರಾಟ ಮಾಡಿದ್ದ .

2011ರಲ್ಲಿ ವಾಂಗ್​ ಹೂ ಎಂಬಾತ 17 ವರ್ಷದವನಿದ್ದ ಸಂದರ್ಭದಲ್ಲಿ ಐಫೋನ್​ 4 ಹಾಗೂ ಐಪ್ಯಾಡ್ 2 ಖರೀದಿಗಾಗಿ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿದ್ದನಂತೆ. ಅಕ್ರಮವಾಗಿ ತನ್ನ ಕಿಡ್ನಿಯನ್ನ ಯಾರಿಗೋ ಮಾರಿದ್ದ ವಾಂಗ್​ ಹೂ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಶಸ್ತ್ರಚಿಕಿತ್ಸೆ ನಡೆದು ಬರೋಬ್ಬರಿ 9 ವರ್ಷದ ಬಳಿಕ ಇದೀಗ ವಾಂಗ್​​ ಡಯಾಲಿಸಿಸ್​ ಮಾಡಿಸಿಕೊಳ್ಳಬೇಕಾದ ದುಸ್ಥಿತಿಗೆ ಬಂದಿದ್ದಾನೆ. ಆಪರೇಷನ್​ ನಡೆದ ಕೆಲವು ದಿನಗಳಲ್ಲೇ ಕಿಡ್ನಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆ ಇನ್ನೊಂದು ಕಿಡ್ನಿಯೂ ವೈಫಲ್ಯವಾಗಿದೆ. ಹೀಗಾಗಿ ಈತನಿಗೆ ಡಯಾಲಿಸಿಸ್​ ಅನಿವಾರ್ಯವಾಗಿದ್ದು ಹಾಸಿಗೆ ಹಿಡಿದಿದ್ದಾನೆ. ಅಕ್ರಮ ಶಸ್ತ್ರ ಚಿಕಿತ್ಸೆ ಆರೋಪದಡಿ 9 ಮಂದಿಯನ್ನ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...