alex Certify ದೇಹವನ್ನು ವಿರೂಪಗೊಳಿಸಲು 6 ಲಕ್ಷ ರೂ. ಖರ್ಚು ಮಾಡಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹವನ್ನು ವಿರೂಪಗೊಳಿಸಲು 6 ಲಕ್ಷ ರೂ. ಖರ್ಚು ಮಾಡಿದ ಭೂಪ

ದೇವರು ಕೊಟ್ಟ ಸಹಜ ಸೌಂದರ್ಯಕ್ಕೆ ರೂಪಾಂತರ ಮಾಡಿ ಚಿತ್ರವಿಚಿತ್ರ ಅವತಾರದಲ್ಲಿ ಕಾಣಿಸಿಕೊಳ್ಳುವುದು ಅನೇಕ ಮಂದಿಗೆ ಫ್ಯಾಶನ್ ಆಗಿಬಿಟ್ಟಿದೆ. ಕೆಲವರಿಗಂತೂ ಈ ಫ್ಯಾಶನ್‌ನ ಗೀಳು ವಿಪರೀತ ಎನ್ನುವ ಮಟ್ಟದಲ್ಲಿದೆ.

ಮಿ. ಸ್ಕಲ್ ಫೇಸ್ ಎಂದೇ ಕರೆಯಲಾಗುವ ಸ್ಯಾಂಡ್ರೋ, ಬಾಡಿ ಮಾಡಿಫಿಕೇಶನ್‌ಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಅವರು ತಮ್ಮ ಸಂಪಾದನೆಯ ಸುಮಾರು ಆರು ಲಕ್ಷ ರೂ.ಗಳಷ್ಟನ್ನು ತಮ್ಮ ಈ ಶೋಕಿಯ ಮೇಲೆಯೇ ಖರ್ಚು ಮಾಡಿದ್ದಾರೆ…!

ಜರ್ಮನಿಯ ಫೇನ್‌ಸ್ಟರ್‌ವಾಲ್ಡೆಯವರಾದ ಈ 39 ವರ್ಷದ ವ್ಯಕ್ತಿ ಅನೇಕ ಪ್ರಕ್ರಿಯೆಗಳಿಗೆ ತಮ್ಮ ಮುಖವನ್ನು ಒಳಗೊಳಿಸಿದ್ದು, ಹಣೆ, ಕೈನ ಹಿಂಬದಿ, ನಾಲಿಗೆಗಳನ್ನು ವಿರೂಪಗೊಳಿಸಿಕೊಂಡಿದ್ದಲ್ಲದೇ ಕಳೆದ ವರ್ಷ ತಮ್ಮ ಕಿವಿಗಳನ್ನೂ ತೆಗೆಸಿಕೊಂಡಿದ್ದಾರೆ.

ಇದುವರೆಗೂ 17 ಬಾರಿ ತಮ್ಮ ದೇಹವನ್ನು ವಿರೂಪಗೊಳಿಸಿಕೊಂಡಿರುವ ಸ್ಯಾಂಡ್ರೋ, ಅನೇಕ ಟ್ಯಾಟೂಗಳು ಹಾಗೂ ಪಿಯರ್ಸಿಂಗ್ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಮೂಗಿನ ತುದಿಯನ್ನು ತೆಗೆಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...