ಕೊರೊನಾ ಟೆಸ್ಟ್ ಅಂದಕೂಡಲೇ ನಿಮ್ಮ ತಲೆಗೆ ಏನು ಬರುತ್ತೆ…? ಮೂಗಿಗೆ ಹಾಗೂ ಗಂಟಲಿನಿಂದ ದ್ರವವನ್ನ ತೆಗೆದು ಅದನ್ನ ಪರೀಕ್ಷೆಗೆ ಕಳುಹಿಸಲಾಗುತ್ತೆ ಅನ್ನೋದು.
ಆದರೆ ಚೀನಾ ಮಾತ್ರ ಈ ಟೆಸ್ಟ್ಗಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು ಇಲ್ಲಿ ಗುದದ್ವಾರದ ಮೂಲಕ ಕೊರೊನಾ ಪರೀಕ್ಷೆ ಮಾಡಲಾಗ್ತಿದೆ.
ಕೊರೊನಾದಿಂದ ಅತಿ ಅಪಾಯದಲ್ಲಿ ಇರುವವರಿಗೆ ಈ ಪರೀಕ್ಷೆಯನ್ನ ಕೈಗೊಳ್ಳಲಾಗುತ್ತೆ. ಅಲ್ಲದೇ ಗಂಟಲು ದ್ರವ ಮಾದರಿ ಸಂಗ್ರಹಕ್ಕಿಂತ ಗುದದ್ವಾರದ ವಿಧಾನದಿಂದ ಹೆಚ್ಚು ನಿಖರ ಫಲಿತಾಂಶ ಸಿಗುತ್ತೆ ಎಂದು ಚೀನಾ ವೈದ್ಯರು ಹೇಳಿದ್ದಾರೆ.
ಕ್ರೆಡಿಟ್ ಕಾರ್ಡ್ ಮೂಲಕ ಪತಿ ಗರ್ಲ್ ಫ್ರೆಂಡ್ ಗುಟ್ಟು ರಟ್ಟು
ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಕಳೆದ ವಾರ 9 ವರ್ಷದ ಬಾಲಕ ಕೊರೊನಾ ಸೋಂಕಿಗೆ ಒಳಗಾದ ಬಳಿಕ ಸಾಮೂಹಿಕವಾಗಿ ಗುದದ್ವಾದರ ಕೊರೊನಾ ಪರೀಕ್ಷೆ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನವರಿ 17ರಿಂದ 3 ಮಿಲಿಯನ್ಗೂ ಹೆಚ್ಚು ನಿವಾಸಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಅಂದಹಾಗೆ ಚೀನಾ ಕಳೆದ ವರ್ಷವೇ ಈ ಗುದದ್ವಾರ ಕೊರೊನಾ ಪರೀಕ್ಷೆಯನ್ನ ನಡೆಸಿತ್ತು. ಆದರೆ ಈ ವಿಧಾನವನ್ನ ಮುಖ್ಯವಾಗಿ ಕ್ವಾರಂಟೈನ್ನಲ್ಲಿ ಇರುವವರಿಗೆ ಮಾತ್ರ ನಡೆಸಿತ್ತು.