ಭಾರೀ ಗಾಳಿಪಟವೊಂದಕ್ಕೆ ಸಿಕ್ಕಿಹಾಕಿಕೊಂಡ ಮೂರು ವರ್ಷದ ಬಾಲಕಿಯೊಬ್ಬಳು 100 ಅಡಿ ಎತ್ತರದಲ್ಲಿ ತೇಲಾಡುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ.
ತೈವಾನ್ ನ ನಾನ್ಲಿಯಾವೋ ಎಂಬಲ್ಲಿ ಗಾಳಿಪಟದ ಹಬ್ಬ ನಡೆಯುತ್ತಿದ್ದ ವೇಳೆ ಈ ಪುಟ್ಟಿ ಕಿತ್ತಳೆ ಬಣ್ಣದ ಗಾಳಿಪಟದೊಂದಿಗೆ ಆಟವಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಭಾರೀ ಗಾಳಿಯೊಂದು ಆಕೆಯನ್ನು ಪಟದೊಂದಿಗೆ ಹೊತ್ತೊಯ್ದುಬಿಟ್ಟಿದೆ.
ಅದೃಷ್ಟವಶಾತ್ ಬಾಲಕಿಗೆ ಯಾವುದೇ ಗಾಯಗಳಾಗಿಲ್ಲ. ಕೆಲವೇ ಸೆಕೆಂಡ್ಗಳ ಬಳಿಕ ಬಾಲಕಿ ಸುರಕ್ಷಿತವಾಗಿ ಕೆಳಗೆ ಇಳಿದುಬಂದಿದ್ದಾಳೆ.
https://twitter.com/RRomannoff/status/1300095267912511488?ref_src=twsrc%5Etfw%7Ctwcamp%5Etweetembed%7Ctwterm%5E1300095267912511488%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fshocking-3-yr-old-girl-gets-launched-100-ft-into-the-air-after-getting-caught-on-giant-kite-watch%2F645176