alex Certify ಅಚ್ಚರಿಗೆ ಕಾರಣವಾಗಿದೆ ಸಮುದ್ರದಲ್ಲಿ ನಡೆದಿರುವ ಈ ವಿದ್ಯಾಮಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಸಮುದ್ರದಲ್ಲಿ ನಡೆದಿರುವ ಈ ವಿದ್ಯಾಮಾನ…!

ಬೀಜಿಂಗ್: ಚೀನಾದ ವಿವಿಧ ಬಂದರುಗಳ ಸಮೀಪ ವಿಚಿತ್ರ ವಿದ್ಯಮಾನವೊಂದು‌ ನಡೆಯುತ್ತಿದೆ.
ಸಾಕಷ್ಟು ಹಡಗುಗಳು ಮುಂದೆ ಹೋಗದೇ ಒಂದೇ ಸ್ಥಳದಲ್ಲಿ ವೃತ್ತಾಕಾರವಾಗಿ ಸುತ್ತುತ್ತಿವೆ.‌ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪಶ್ಚಿಮ ಕೇಪ್‌ ಟೌನ್ ಭಾಗದಲ್ಲಿ ಈ ವಿದ್ಯಮಾನ ಕಂಡುಬರುತ್ತಿದೆ. ಸಮುದ್ರ ಸುಳಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದು ಜಿಪಿಎಸ್ ಆಧಾರಿತ ಅಟೋಮ್ಯಾಟಿಕ್ ಟ್ರ್ಯಾಕಿಂಗ್ ಸಿಸ್ಟಮ್ (ಎಐಎಸ್) ವ್ಯತ್ಯಾಸದಿಂದ ಆದ ಸಮಸ್ಯೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ವಿಲ್ಲೌಲಿ ಎಂಬ ಹಡಗು ಮೇ 31 ರಂದು ಇದೇ ರೀತಿ ಸುತ್ತಿತ್ತು. ಕ್ಯಾಪ್ಟನ್ ಹಡಗನ್ನು‌ ನಿಯಂತ್ರಣಕ್ಕೆ ತರಲು ಸಾಧ್ಯವಾಗಿರಲಿಲ್ಲ. ಚೀನಾ ಅಧಿಕಾರಿಗಳು ಹಡಗಿನ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಹಡಗುಗಳ ಓಡಾಟಕ್ಕೆ ಅಳವಡಿಸಿರುವ ಜಿಪಿಎಸ್ ಗುರುತಿನ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದ್ದೂ ಕಂಡುಬಂದಿದೆ.‌ ಚೀನಾದ ಹಲವು ಬಂದರುಗಳಲ್ಲಿ ಇದೊಂದು ಸಾಮಾನ್ಯ ವಿದ್ಯಮಾನವಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿದೆ ಎಂದು ಸ್ಕೈ ನ್ಯೂಸ್ ಎಂಬ ಮಾಧ್ಯಮ ವರದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...