ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇಂಗ್ಲೆಂಡ್ ಯೂನಿವರ್ಸಿಟಿಯೊಂದರ ಫಾರ್ಮ್ನಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಫೆಬ್ರವರಿ 19ನೇ ತಾರೀಖು ಮುಂಜಾನೆ 4 ಗಂಟೆ ಸುಮಾರಿಗೆ ಈ ಐದು ಕುರಿ ಮರಿಗಳು ಜನಸಿವೆ. ಈ ಐದು ಮರಿಗಳೂ ಆರೋಗ್ಯವಾಗಿವೆ.
ಕೃಷಿ ಕ್ಷೇತ್ರದಲ್ಲಿ 14 ವರ್ಷಗಳ ಅನುಭವ ಹೊಂದಿರುವ ಫಾರ್ಮ್ನ ಮ್ಯಾನೇಜರ್ ಆಂಡ್ರ್ಯೂ ಈಸ್ಟಾಬ್ರೂಕ್, ನನ್ನ ಇಷ್ಟು ವರ್ಷದ ಅನುಭವದಲ್ಲಿ ಈ ರೀತಿ ಕುರಿಯೊಂದು ಒಂದೇ ಬಾರಿಗೆ ಐದು ಮರಿಗೆ ಜನ್ಮ ನೀಡಿದ್ದನ್ನ ಕಂಡಿಲ್ಲ. ಅದು ಅಲ್ಲದೇ ಜನಿಸಿದ ಎಲ್ಲಾ ಮರಿಗಳು ಆರಾಮಾಗಿ ಇರೋದು ಇನ್ನೂ ಆಶ್ಚರ್ಯ ತಂದಿದೆ ಎಂದು ಹೇಳಿದ್ರು.
ಕುರಿ ಗರ್ಭಿಣಿಯಾಗಿದ್ದ ವೇಳೆ ಸ್ಕ್ಯಾನ್ನಲ್ಲಿ ನಾಲ್ಕು ಮರಿ ಇರೋದು ಕಂಡು ಬಂದಿತ್ತು. ಆದರೆ ಈ ಕುರಿ ಮೊದಲು ಮೂರೇ ಮರಿಗೆ ಜನ್ಮ ನೀಡಿದ್ದನ್ನ ಕಂಡು ಸ್ಕ್ಯಾನ್ ರಿಪೋರ್ಟ್ ತಪ್ಪಾಗಿದೆ ಎಂದು ಭಾವಿಸಿದ್ವಿ. ಆದರೆ ಕೆಲಗಂಟೆಗಳ ಬಳಿಕ ಬಂದು ನೋಡಿದ್ರೆ ಈ ಕುರಿ 5 ಮರಿಗಳಿಗೆ ಜನ್ಮ ನೀಡಿತ್ತು ಎಂದು ಹೇಳಿದ್ದಾರೆ.