alex Certify ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…!

ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್​​ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇಂಗ್ಲೆಂಡ್​ ಯೂನಿವರ್ಸಿಟಿಯೊಂದರ ಫಾರ್ಮ್​ನಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಫೆಬ್ರವರಿ 19ನೇ ತಾರೀಖು ಮುಂಜಾನೆ 4 ಗಂಟೆ ಸುಮಾರಿಗೆ ಈ ಐದು ಕುರಿ ಮರಿಗಳು ಜನಸಿವೆ. ಈ ಐದು ಮರಿಗಳೂ ಆರೋಗ್ಯವಾಗಿವೆ.

ಕೃಷಿ ಕ್ಷೇತ್ರದಲ್ಲಿ 14 ವರ್ಷಗಳ ಅನುಭವ ಹೊಂದಿರುವ ಫಾರ್ಮ್​ನ ಮ್ಯಾನೇಜರ್​ ಆಂಡ್ರ್ಯೂ ಈಸ್ಟಾಬ್ರೂಕ್, ನನ್ನ ಇಷ್ಟು ವರ್ಷದ ಅನುಭವದಲ್ಲಿ ಈ ರೀತಿ ಕುರಿಯೊಂದು ಒಂದೇ ಬಾರಿಗೆ ಐದು ಮರಿಗೆ ಜನ್ಮ ನೀಡಿದ್ದನ್ನ ಕಂಡಿಲ್ಲ. ಅದು ಅಲ್ಲದೇ ಜನಿಸಿದ ಎಲ್ಲಾ ಮರಿಗಳು ಆರಾಮಾಗಿ ಇರೋದು ಇನ್ನೂ ಆಶ್ಚರ್ಯ ತಂದಿದೆ ಎಂದು ಹೇಳಿದ್ರು.

ಕುರಿ ಗರ್ಭಿಣಿಯಾಗಿದ್ದ ವೇಳೆ ಸ್ಕ್ಯಾನ್​ನಲ್ಲಿ ನಾಲ್ಕು ಮರಿ ಇರೋದು ಕಂಡು ಬಂದಿತ್ತು. ಆದರೆ ಈ ಕುರಿ ಮೊದಲು ಮೂರೇ ಮರಿಗೆ ಜನ್ಮ ನೀಡಿದ್ದನ್ನ ಕಂಡು ಸ್ಕ್ಯಾನ್​ ರಿಪೋರ್ಟ್ ತಪ್ಪಾಗಿದೆ ಎಂದು ಭಾವಿಸಿದ್ವಿ. ಆದರೆ ಕೆಲಗಂಟೆಗಳ ಬಳಿಕ ಬಂದು ನೋಡಿದ್ರೆ ಈ ಕುರಿ 5 ಮರಿಗಳಿಗೆ ಜನ್ಮ ನೀಡಿತ್ತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...