ಯಾವುದೇ ತಾಯಿಗೂ ತನ್ನ ಮಕ್ಕಳು ಖುಷಿಯಿಂದ ಇರುವುದನ್ನು ನೋಡುವುದು ಇಷ್ಟ — ಅವು ಹೆತ್ತ ಮಕ್ಕಳೆ ಆಗಿರಲಿ, ದತ್ತು ಮಕ್ಕಳೇ ಆಗಿರಲಿ.
ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಈ ವಿಡಿಯೋದಲ್ಲಿ ಎಲಿಝಬೆತ್ ಫ್ರೈಡ್ಲ್ಯಾಂಡ್ ಹೆಸರಿನ ಮಹಿಳೆಯೊಬ್ಬರು ತಮ್ಮ ದತ್ತು ಪುತ್ರಿಯ 18ನೇ ಹುಟ್ಟುಹಬ್ಬಕ್ಕೆ ಕಾರೊಂದನ್ನು ಕೊಟ್ಟಿದ್ದಾರೆ. ಗಿಫ್ಟ್ ಬಾಕ್ಸ್ ತೆರೆದು ಒಳಗಿದ್ದ ಕೀಲಿಗಳನ್ನು ನೋಡಿ ಮಗಳು ಖುಷಿ ಪಡುತ್ತಿರುವ ಕ್ಷಣಗಳ ವಿಡಿಯೋ ರೆಕಾರ್ಡ್ ಮಾಡಿಕೊಂಡು ಶೇರ್ ಮಾಡಿಕೊಂಡಿದ್ದಾರೆ ಎಲಿಝಬೆತ್. ಅಮ್ಮ-ಮಗಳ ನಡುವಿನ ಈ ಸುಂದರ ಕ್ಷಣಗಳನ್ನು ನೋಡಿ ಆನಂದಿಸಿ.
https://www.instagram.com/p/CJ6J1cLrEjn/?utm_source=ig_web_copy_link