alex Certify ಮದ್ಯದ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ…! ಏಳು ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ…! ಏಳು ಮಂದಿ ಸಾವು

ಪಾರ್ಟಿಯೊಂದರಲ್ಲಿ ಮದ್ಯದ ಬದಲಾಗಿ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ ಮಾಡಿದ 7 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಇಬ್ಬರು ಕೋಮಾಗೆ ಜಾರಿದ ದಾರುಣ ಘಟನೆ ರಷ್ಯಾದ ಯಾಕುಟಿ ಎಂಬಲ್ಲಿ ನಡೆದಿದೆ.

ಒಂಬತ್ತು ಮಂದಿ ಸ್ಥಳೀಯ ಗುಂಪೊಂದು ದುರ್ಬಲಗೊಳಿಸಿದ ಹ್ಯಾಂಡ್​ ಸ್ಯಾನಿಟೈಸರ್​ ಸೇವಿಸಿದ ಬಳಿಕ ಅನಾರೋಗ್ಯದಿಂದ ಬಳಲಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ ಇತರ ಆರು ಮಂದಿಯನ್ನ ವೈದ್ಯಕೀಯ ವಿಮಾನದ ಮೂಲಕ ಯಾಕುಟ್ಸ್ಕ್​ಗೆ ಕಳುಹಿಸಿಕೊಡಲಾಗಿತ್ತಾದರೂ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಘಟನಾ ಸ್ಥಳದಲ್ಲಿ ಲೇಬಲ್​ ಹೊಂದಿರದ 5 ಲೀಟರ್​ ಸ್ಯಾನಿಟೈಸರ್​ ಕಂಡುಬಂದಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

9 ಮಂದಿ ಸದಸ್ಯರ ಗುಂಪು ಕುಡಿದ ಸ್ಯಾನಿಟೈಸರ್​ನಲ್ಲಿ 60 ಪ್ರತಿಶತ ಮಿಥೆನಾಲ್​ ಇತ್ತು ಎಂಬ ಅಂಶ ತನಿಖೆ ವೇಳೆ ಹೊರಬಿದ್ದಿದೆ. ಮಿಥೆನಾಲ್​ ಹೊಂದಿರುವ ಸ್ಯಾನಿಟೈಸರ್​ ಮಾರಾಟಕ್ಕೆ ಯಾಕುಟಿಯಾ ಆರೋಗ್ಯ ಇಲಾಖೆ ನಿರ್ಬಂಧ ಹೇರಿದೆ. 48 ವರ್ಷದ ಮಹಿಳೆ ಹಾಗೂ 32 ವರ್ಷದ ವ್ಯಕ್ತಿ ಕೋಮಾದಲ್ಲಿದ್ದು ವೆಂಟಿಲೇಟರ್​ನಲ್ಲಿ ಇರಿಸಲಾಗಿದೆ. ಇವರಿಬ್ಬರೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...