alex Certify ಈ ದೇಶದಲ್ಲಿ ಗರ್ಭಿಣಿಯರಿಗೆ ಇರುವ ಮಾರ್ಗಸೂಚಿ ನೋಡಿದ್ರೆ ಬೆಚ್ಚಿ ಬೀಳ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ಗರ್ಭಿಣಿಯರಿಗೆ ಇರುವ ಮಾರ್ಗಸೂಚಿ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ನಲ್ಲಿ ಗರ್ಭಿಣಿಯರಿಗೆ ವಿಚಿತ್ರವಾದ ಸಲಹೆಗಳನ್ನ ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಿಯೋಲ್​ನ ಗರ್ಭಿಣಿ ಹಾಗೂ ಮಗು ಜನನ ಮಾಹಿತಿ ಕೇಂದ್ರ ವಿಚಿತ್ರವಾದ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಇದು 2019ರಲ್ಲಿ ರಿಲೀಸ್​ ಮಾಡಲಾದ ಮಾರ್ಗಸೂಚಿಯಾಗಿದ್ದು ಇದರ ಸ್ಕ್ರೀನ್​ಶಾಟ್​ ಕೆಲದಿನಗಳಿಂದ ವೈರಲ್​ ಆಗಿದೆ.

ಗೈಡ್​​ಲೈನ್​ನಲ್ಲಿ ಗರ್ಭಿಣಿ ತನ್ನ ಪತಿ ಹಾಗೂ ಆತನ ಕುಟುಂಬಕ್ಕೆ ಊಟ ಬಡಿಸಬೇಕು. ಪತಿ ಅಡುಗೆ ಮಾಡಲು ಬರುವವನಲ್ಲನಾಗಿದ್ದರಂತೂ ಗರ್ಭಿಣಿ ಪತ್ನಿಯೇ ಇದರ ಜವಾಬ್ದಾರಿಯನ್ನ ಹೊತ್ತುಕೊಳ್ಳಬೇಕು. ಅಲ್ಲದೇ ಗರ್ಭಿಣಿ ಮಹಿಳೆ ಯಾವಾಗಲೂ ತಲೆಗೂದಲನ್ನ ಕಟ್ಟಿಕೊಂಡೇ ಇರಬೇಕು. ಇನ್ನು ಗರ್ಭವತಿಯಾದ ಸಂದರ್ಭದಲ್ಲಿ ತೂಕ ಹೆಚ್ಚಾಗೋದನ್ನ ತಡೆಯೋದಕೋಸ್ಕರ ಅವರು ಮದುವೆಗೂ ಮುಂಚೆ ಹಾಕುತ್ತಿದ್ದ ಚಿಕ್ಕ ಹಾಗೂ ಒಳ್ಳೆ ಡ್ರೆಸ್​ಗಳನ್ನ ಧರಿಸಬೇಕು. ಇದರಿಂದ ಗರ್ಭಿಣಿಯರು ತೂಕ ಹೆಚ್ಚಾಗುತ್ತೆ ಎಂಬ ಭಯದಿಂದ ಹೆಚ್ಚು ಆಹಾರ ಸೇವಿಸಲ್ಲ. ಹಾಗೂ ವ್ಯಾಯಾಮ ಮಾಡಲು ಪ್ರೇರಣೆ ನೀಡಲಿದೆ.

ಹೆರಿಗೆಗೂ ಮುನ್ನ ಗರ್ಭಿಣಿ ತನ್ನ ಮನೆಯಲ್ಲಿ ಎಲ್ಲಾ ಅಗತ್ಯ ವಸ್ತುಗಳು ಇವೆಯಾ ಅನ್ನೋದನ್ನ ಪರಿಶೀಲನೆ ಮಾಡಿಯೇ ಹೋಗಬೇಕು. ಇದರಿಂದಾಗಿ ಮಹಿಳೆಯ ಹೆರಿಗೆ ಸಂದರ್ಭದಲ್ಲಿ ಆಕೆಯ ಕುಟುಂಬಸ್ಥರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಇಷ್ಟು ಮಾತ್ರವಲ್ಲದೇ ಗರ್ಭಿಣಿಯರು ಆಕರ್ಷಕ ಡ್ರೆಸ್​​ಗಳನ್ನ ಹಾಕಿಕೊಳ್ಳಬೇಕು. ಫ್ರಿಡ್ಜ್​​ ಸ್ವಚ್ಛ ಮಾಡಬೇಕು ಎಂದೆಲ್ಲ ಹೇಳಲಾಗಿದೆ. ಆದರೆ ಈ ಮಾರ್ಗಸೂಚಿಯಲ್ಲಿ ಪತಿಗೆ ಯಾವುದೇ ಜವಾಬ್ದಾರಿಯನ್ನ ನೀಡಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...