alex Certify ಪ್ರೀತಿಯ ನಾಯಿಗಾಗಿ ಪ್ಲೇ ಗ್ರೌಂಡ್ ಸೃಷ್ಟಿಸಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ನಾಯಿಗಾಗಿ ಪ್ಲೇ ಗ್ರೌಂಡ್ ಸೃಷ್ಟಿಸಿದ ಭೂಪ

ಬ್ಲಡ್ ಹೌಂಡ್ ಜಾತಿಗೆ ಸೇರಿದ ಬೆಂಟ್ಲಿ ಹೆಸರಿನ ನಾಯಿಯು ತಾನು ಅಪೇಕ್ಷಿಸಿದ್ದನ್ನು ಮಾಲೀಕನಿಂದ ಗಳಿಸಿದ್ದಕ್ಕಾಗಿ ಸುದ್ದಿಯಾಗಿದೆ.

ಹಲವು ಮಾಲೀಕರ ಕೈದಾಟಿ ತಮ್ಮ ಬಳಿ ಬಂದ ನಾಯಿಗೆ ಹುಲ್ಲು ಹಾಸಿನಲ್ಲಿ ಆಟವಾಡುವುದು ಇಷ್ಟವೆಂದ ಅರಿತ ಕಟರಾ ಎಂಬುವರು ಅದರ ಇಚ್ಛೆ ಪೂರೈಸಿದ್ದಾರೆ.

ಕಟರಾ ಕೈಗೆ ಬೆಂಟ್ಲಿ ಸಿಕ್ಕಾಗ ಅವರು ಸಿಂಗಲ್ ಬೆಡ್ ರೂಂ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ನಾಯಿ ಬಯಸುತ್ತಿದ್ದ ಹಸಿರು ಹಾಸು ಸಿಗದಾಯಿತು. ಅದು ಮಾಲೀಕರ ಗಮನಕ್ಕೂ ಬಂದಿದೆ. ಬಳಿಕ ನಾಯಿಗಾಗಿ ತನ್ನ ಜೀವನ ‌ಮಟ್ಟವನ್ನೇ ಬದಲಿಸಿಕೊಳ್ಳಲು ಬಯಸಿ ತಮ್ಮ ಗೆಳೆಯನ ಸಹಾಯ ಬಯಸಿದರು.

ನಾಯಿಗಾಗಿಯೇ ಒಂದು ಸಣ್ಣ ಹುಲ್ಲುಹಾಸಿನ ಪ್ರಾಂಗಣ ಮಾಡಿಕೊಡಲಾಗಿದ್ದು, ನಾಯಿ ಖುಷಿಯಲ್ಲಿದೆ. ಈ ನಾಯಿ ಪ್ರೇಮ ಫೋಟೋ ಸಹಿತ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...