ಡೇಟಿಂಗ್ ಅಪ್ಲಿಕೇಶನ್ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್ 19 ಜೊತೆಯಲ್ಲೆ ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ಗಳೂ ಸಹ ಭಾರೀ ಫೇಮಸ್ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ ಅವರ ಚಿಂತನೆ, ಸೌಂದರ್ಯ, ಕುಟುಂಬದ ಬಗ್ಗೆ ಹೀಗೆ ಹಲವಾರು ಆಯಾಮಗಳನ್ನ ನೋಡಿ ನಿರ್ಧಾರಕ್ಕೆ ಬರಲಾಗುತ್ತೆ.
ಹೀಗಾಗಿ ಇಂತಹ ಅಪ್ಲಿಕೇಶನ್ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳಬೇಕಾಗುತ್ತೆ. ಆದರೆ ಈ ಡೇಟಿಂಗ್ ಆಪ್ಗಳು ಇದೀಗ ಹೊಸದೊಂದು ಪ್ರಶ್ನೆಯನ್ನ ಬಳಕೆದಾರರಿಗೆ ಕೇಳುತ್ತಿವೆ.
ಟಿಂಡರ್, ಬಂಬಲ್, ಒಕೆ ಕ್ಯುಪಿಡ್ ಹೀಗೆ ನಾನಾ ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ಗಳು ಲಭ್ಯವಿದೆ. ಇದರಲ್ಲಿ ಕೆಲ ಅಪ್ಲಿಕೇಶನ್ಗಳು ಲಸಿಕೆ ಸ್ವೀಕಾರದ ಬಗ್ಗೆಯೂ ಮಾಹಿತಿ ಕೇಳಿವೆ. ಇಲೇಟ್ ಡೇಟ್ ಎಂಬ ಅಪ್ಲಿಕೇಶನ್ ಒಂದರಲ್ಲಿ ವ್ಯಾಕ್ಸಿನ್ ಸ್ಟೇಟಸ್ ಎಂಬ ಹೊಸ ಆಯ್ಕೆಯನ್ನ ನೀಡಲಾಗಿದ್ದು, ಇದರಲ್ಲಿ ನೀವು ಎಷ್ಟು ಡೋಸ್ ಲಸಿಕೆ ಪೂರೈಸಿದ್ದೀರಿ ಎಂಬ ಮಾಹಿತಿ ನೀಡಬೇಕಾಗುತ್ತೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಓಕೆ ಕ್ಯೂಪಿಡ್ ವಕ್ತಾರ ಮಿಶೆಲ್ ಕಾಯೆ, ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ನೀವು ಲಸಿಕೆ ಪಡೆದಿದ್ದೀರಾ ಎಂಬ ಮಾಹಿತಿಯನ್ನ ನೀಡೋದು ಸದ್ಯದ ಹಾಟೆಸ್ಟ್ ವಿಚಾರಗಳಲ್ಲಿ ಒಂದಾಗಿದೆ. ಯಾರು ಲಸಿಕೆಗಳನ್ನ ಸ್ವೀಕರಿಸಿದ್ದಾರೋ ಅಂತವರಿಗೆ ಹೆಚ್ಚು ಲೈಕ್ಸ್ ಸಿಗುತ್ತಿದೆ ಎಂದು ಹೇಳಿದ್ದಾರೆ.