alex Certify ಕತ್ತಲಲ್ಲಿ ಪ್ರಕಾಶಿಸುತ್ತೆ ಈ ಅಪರೂಪದ ಶಾರ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತಲಲ್ಲಿ ಪ್ರಕಾಶಿಸುತ್ತೆ ಈ ಅಪರೂಪದ ಶಾರ್ಕ್

ನ್ಯೂಜಿಲೆಂಡ್​​ನಲ್ಲಿ ಶಾರ್ಕ್​ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ಆಳ ಸಮುದ್ರದಲ್ಲಿ ವಾಸಿಸುವ ಮೂರು ಹೊಸ ಪ್ರಭೇದಗಳನ್ನ ಕಂಡು ಹಿಡಿದಿದ್ದಾರೆ. ಈ ಪ್ರಬೇಧಗಳು ಕತ್ತಲಿನಲ್ಲಿ ಹೊಳೆಯುವ ಸಾಮರ್ಥ್ಯ ಹೊಂದಿದೆ. ಈ ಮೂರು ಶಾರ್ಕ್​ಗಳಲ್ಲಿ ಒಂದನ್ನ ವಿಶ್ವದ ಅತಿದೊಡ್ಡ ಪ್ರಕಾಶಮಾನ ಕಶೇರುಕ ಎಂದು ಗುರುತಿಸಲಾಗಿದೆ.

ನ್ಯೂಜಿಲೆಂಡ್​ನ ಪೂರ್ವ ಕರಾವಳಿ ಭಾಗದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಕೈಟೆಫಿನ್​ ಶಾರ್ಕ್​, ಕಪ್ಪು ಹೊಟ್ಟೆಯ ಲ್ಯಾಂಟರ್ನ್​ ಶಾರ್ಕ್​ ಹಾಗೂ ದಕ್ಷಿಣ ಲ್ಯಾಂಟರ್ನ್​ ಶಾರ್ಕ್​ಗಳನ್ನ ಪತ್ತೆ ಮಾಡಲಾಗಿದೆ. ಇದರಲ್ಲಿ ಕೈಟೆಫಿನ್​ ಶಾರ್ಕ್​ನ್ನು ವಿಶ್ವದ ಅತಿದೊಡ್ಡ ಪ್ರಕಾಶಮಾನವಾದ ಕಶೇರುಕ ಎಂದು ಗುರುತಿಸಲಾಗಿದೆ.

ಬಿಳಿ ಕೈಟಫಿನ್​ ಶಾರ್ಕ್ 1.8 ಮೀಟರ್​ ಉದ್ದದವರೆಗೆ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಇತರೆ ಎರಡು ಜಾತಿಗಳು ತುಲನಾತ್ಮಕವಾಗಿ ಚಿಕ್ಕದಿವೆ.
ಆಳ ಸಮುದ್ರ ಜೀವಶಾಸ್ತ್ರಜ್ಞೆ ಡಾ. ದಿವಾ ಅಮೋನ್​ ಹೊಳೆಯುವ ಶಾರ್ಕ್​ಗಳ ಫೋಟೋವನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...