ನ್ಯೂಜಿಲೆಂಡ್ನಲ್ಲಿ ಶಾರ್ಕ್ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ಆಳ ಸಮುದ್ರದಲ್ಲಿ ವಾಸಿಸುವ ಮೂರು ಹೊಸ ಪ್ರಭೇದಗಳನ್ನ ಕಂಡು ಹಿಡಿದಿದ್ದಾರೆ. ಈ ಪ್ರಬೇಧಗಳು ಕತ್ತಲಿನಲ್ಲಿ ಹೊಳೆಯುವ ಸಾಮರ್ಥ್ಯ ಹೊಂದಿದೆ. ಈ ಮೂರು ಶಾರ್ಕ್ಗಳಲ್ಲಿ ಒಂದನ್ನ ವಿಶ್ವದ ಅತಿದೊಡ್ಡ ಪ್ರಕಾಶಮಾನ ಕಶೇರುಕ ಎಂದು ಗುರುತಿಸಲಾಗಿದೆ.
ನ್ಯೂಜಿಲೆಂಡ್ನ ಪೂರ್ವ ಕರಾವಳಿ ಭಾಗದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಕೈಟೆಫಿನ್ ಶಾರ್ಕ್, ಕಪ್ಪು ಹೊಟ್ಟೆಯ ಲ್ಯಾಂಟರ್ನ್ ಶಾರ್ಕ್ ಹಾಗೂ ದಕ್ಷಿಣ ಲ್ಯಾಂಟರ್ನ್ ಶಾರ್ಕ್ಗಳನ್ನ ಪತ್ತೆ ಮಾಡಲಾಗಿದೆ. ಇದರಲ್ಲಿ ಕೈಟೆಫಿನ್ ಶಾರ್ಕ್ನ್ನು ವಿಶ್ವದ ಅತಿದೊಡ್ಡ ಪ್ರಕಾಶಮಾನವಾದ ಕಶೇರುಕ ಎಂದು ಗುರುತಿಸಲಾಗಿದೆ.
ಬಿಳಿ ಕೈಟಫಿನ್ ಶಾರ್ಕ್ 1.8 ಮೀಟರ್ ಉದ್ದದವರೆಗೆ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಇತರೆ ಎರಡು ಜಾತಿಗಳು ತುಲನಾತ್ಮಕವಾಗಿ ಚಿಕ್ಕದಿವೆ.
ಆಳ ಸಮುದ್ರ ಜೀವಶಾಸ್ತ್ರಜ್ಞೆ ಡಾ. ದಿವಾ ಅಮೋನ್ ಹೊಳೆಯುವ ಶಾರ್ಕ್ಗಳ ಫೋಟೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.