alex Certify ರಷ್ಯಾ – ಅಮೆರಿಕನ್ ಮೀನುಗಳ ಸಮಾಗಮದಿಂದ ಜನಿಸಿದೆ ಈ ಅಪರೂಪದ ಜೀವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ – ಅಮೆರಿಕನ್ ಮೀನುಗಳ ಸಮಾಗಮದಿಂದ ಜನಿಸಿದೆ ಈ ಅಪರೂಪದ ಜೀವಿ

ರಷ್ಯಾದ ’ಸ್ಟ್ರಜನ್’ ಹಾಗೂ ಅಮೆರಿಕದ ’ಪ್ಯಾಡಲ್ ‌ಫಿಶ್‌’ಗಳನ್ನು ಒಗ್ಗೂಡಿಸಿ ’ಸ್ಟ್ರಡಲ್ ‌ಫಿಶ್’ ಎಂಬ ಹೈಬ್ರಿಡ್ ಮೀನೊಂದನ್ನು ಸಂಶೋಧಕರು ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ಹಂಗೇರಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ಮೀನು ಇದೀಗ ಹರೆಯಕ್ಕೆ ಬಂದಿದೆ. ಈ ಮೀನಿನ ಪೂರ್ವಜರು ಕಡೆಯ ಬಾರಿ ಜೀವಂತವಿದ್ದದ್ದು 184 ಮಿಲಿಯನ್ ವರ್ಷಗಳ ಹಿಂದೆ ಎಂದು ತಿಳಿದುಬಂದಿದ್ದು, ಇದೊಂದು ಜೀವಂತ ಪಳೆಯುಳಿಕೆ ಎನ್ನಲಾಗುತ್ತಿದೆ.

ಲೈಂಗಿಕೇತರ ಸಂತಾನೋತ್ಪತ್ತಿಯಾದ ಗೈನೋಜೆನೆಸಿಸ್‌ ಕ್ರಿಯೆಯ ಮೂಲಕ ಡಿಎನ್‌ಎಯ ಕೊಡುಗೆ ಇಲ್ಲದೇ, ವೀರ್ಯಾಣುಗಳ ಉಪಸ್ಥಿತಿಯಲ್ಲಿ ಈ ಮೀನಿಗೆ ಹುಟ್ಟು ನೀಡುವ ಯತ್ನದಲ್ಲಿ ನೂರಾರು ಹೈಬ್ರಿಡ್ ಮೀನುಗಳು ಜನಿಸಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...