alex Certify ಕೊರೊನಾ ಸಂಕಷ್ಟದ ನಡುವೆ ಪೋಷಕರನ್ನ ʼಅಪಹಾಸ್ಯʼ ಮಾಡಲು ಹೋಗಿ ದುಬಾರಿ ದಂಡ ತೆತ್ತ ಶಾಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆ ಪೋಷಕರನ್ನ ʼಅಪಹಾಸ್ಯʼ ಮಾಡಲು ಹೋಗಿ ದುಬಾರಿ ದಂಡ ತೆತ್ತ ಶಾಲೆ…!

ಕಳೆದ 10 ತಿಂಗಳಲ್ಲಿ ಆನ್​ಲೈನ್ ಕ್ಲಾಸ್​ ಹಾಗೂ ಜೂಮ್​ ಮೀಟಿಂಗ್​​ನಲ್ಲಿ ರೆಕಾರ್ಡ್ ಆದ ಹಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಕೊರೊನಾ ವೈರಸ್​​ನಿಂದಾಗಿ ಆನ್​​ಲೈನ್ ಮೀಟಿಂಗ್​ ಹಾಗೂ ಕ್ಲಾಸ್​ಗಳು ಸರ್ವೇ ಸಾಮಾನ್ಯವಾಗಿದೆ. ಆದರೆ ಸಾರ್ವಜನಿಕ ಮೀಟಿಂಗ್​​ನಲ್ಲಿ ಸಾಕಷ್ಟು ಫನ್ನಿ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹಾಕುತ್ತಲೇ ಇದೆ.

ಕಳೆದ ಕೆಲ ವಾರಗಳಿಂದ ಆನ್​ಲೈನ್​ ಕ್ಲಾಸಿನ ವಿಡಿಯೋಗಳಂತೂ ಟ್ರೆಂಡ್​ ಅನ್ನೇ ಸೃಷ್ಟಿಸಿದೆ.

ಅದರಲ್ಲೂ ಶ್ವೇತಾ ಎಂಬ ಹೆಸರಿನ ವಿದ್ಯಾರ್ಥಿನಿ 111 ಮಂದಿ ಇದ್ದ ಆನ್​ಲೈನ್​ ಕ್ಲಾಸ್​ನಲ್ಲಿ ಸ್ನೇಹಿತನ ಲವ್​ ಲೈಫ್​ ಬಗ್ಗೆ ಮಾತಾಡಿದ್ದು ನಿಮಗೂ ಗೊತ್ತಿದ್ದಿರಬಹುದು. ಈ ವಿಡಿಯೋ ವೈರಲ್​ ಆದ ಬಳಿಕ ಇಂತಹ ಹಲವಾರು ಘಟನೆಗಳು ಬೆಳಕಿಗೆ ಬರ್ತಾನೇ ಇದೆ.
ಇದೀಗ ಅಮೆರಿಕದಿಂದ ಇಂತಹದ್ದೇ ಒಂದು ಆನ್​ಲೈನ್​ ಮೀಟಿಂಗ್​​ನಲ್ಲಿ ನಡೆದ ವಿಚಿತ್ರ ಘಟನೆಯ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಕಾನ್ಫರೆನ್ಸ್ ಕಾಲ್​ನಲ್ಲಿದ್ದರು.

ಸಾರ್ವಜನಿಕ ಸಭೆಯಲ್ಲಿ ಪೋಷಕರು ಭಾಗಿಯಾಗಿದ್ದಾರೆ ಎಂಬ ಅರಿವಿಲ್ಲದೇ ಶಾಲಾ ಮಂಡಳಿಯ ಸದಸ್ಯರು ಹಾಗೂ ಅಧ್ಯಕ್ಷರು ಪೋಷಕರನ್ನ ಅಪಹಾಸ್ಯ ಮಾಡೋಕೆ ಹೋಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದಂಡ ತೆತ್ತಿದ್ದಾರೆ. ಉತ್ತರ ಕ್ಯಾಲಿರ್ಫೋನಿಯಾದ ಶಾಲೆಯೊಂದರ ಆನ್​ಲೈನ್​ ಮೀಟಿಂಗ್​ನಲ್ಲಿ ಈ ಘಟನೆ ನಡೆದಿದೆ.

ಫೆಬ್ರವರಿ 17ನೇ ತಾರೀಖಿನಿಂದು ಶಾಲೆಗಳ ಪುನಾರಂಭ ವಿಚಾರವಾಗಿ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿತ್ತು ಎನ್ನಲಾಗಿದೆ. ಮುಜುಗರದ ಘಟನೆ ನಡೆದ 2 ದಿನಗಳ ಬಳಿಕ ಕಿಮ್​ ಬಿಡೆ, ಎರಿಕಾ ಇಪ್ಪೊಲಿಟೋ ಹಾಗೂ ರಿಚಿ ಮಸದಾಸ್​ ಜೊತೆ ಅಧ್ಯಕ್ಷೆ ಲಿಸಾ ಬ್ರಿಜೆಂಡೈಸ್​ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಯುಟ್ಯೂಬ್​ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಮೊದಲು ಲಿಸಾ ಕರೆಯಲ್ಲಿ ನಾವು ಮಾತ್ರ ಇದ್ದೇವಾ ಎಂದು ಕೇಳುತ್ತಾರೆ. ಬಳಿಕ ಆಡಳಿತ ಮಂಡಳಿಯ ಸದಸ್ಯರೊಬ್ಬರು ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸುವ ಮೂಲಕ ಮನೆಯಲ್ಲಿ ಆರಾಮಾಗಿ ಗಾಂಜಾ ಸೇವಿಸೋಕೆ ಪ್ಲಾನ್​ ಮಾಡ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಮಾತನ್ನ ಕೆಲ ಪೋಷಕರು ಕೇಳಿಸಿಕೊಂಡಿದ್ದು ಆಡಳಿತ ಮಂಡಳಿ ಅಧ್ಯಕ್ಷೆ ಹಾಗೂ ಸದಸ್ಯರ ರಾಜೀನಾಮೆಗೆ ಆಗ್ರಹಿಸಿದ್ದರು,

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...