ಕಳೆದ 10 ತಿಂಗಳಲ್ಲಿ ಆನ್ಲೈನ್ ಕ್ಲಾಸ್ ಹಾಗೂ ಜೂಮ್ ಮೀಟಿಂಗ್ನಲ್ಲಿ ರೆಕಾರ್ಡ್ ಆದ ಹಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೊರೊನಾ ವೈರಸ್ನಿಂದಾಗಿ ಆನ್ಲೈನ್ ಮೀಟಿಂಗ್ ಹಾಗೂ ಕ್ಲಾಸ್ಗಳು ಸರ್ವೇ ಸಾಮಾನ್ಯವಾಗಿದೆ. ಆದರೆ ಸಾರ್ವಜನಿಕ ಮೀಟಿಂಗ್ನಲ್ಲಿ ಸಾಕಷ್ಟು ಫನ್ನಿ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹಾಕುತ್ತಲೇ ಇದೆ.
ಕಳೆದ ಕೆಲ ವಾರಗಳಿಂದ ಆನ್ಲೈನ್ ಕ್ಲಾಸಿನ ವಿಡಿಯೋಗಳಂತೂ ಟ್ರೆಂಡ್ ಅನ್ನೇ ಸೃಷ್ಟಿಸಿದೆ.
ಅದರಲ್ಲೂ ಶ್ವೇತಾ ಎಂಬ ಹೆಸರಿನ ವಿದ್ಯಾರ್ಥಿನಿ 111 ಮಂದಿ ಇದ್ದ ಆನ್ಲೈನ್ ಕ್ಲಾಸ್ನಲ್ಲಿ ಸ್ನೇಹಿತನ ಲವ್ ಲೈಫ್ ಬಗ್ಗೆ ಮಾತಾಡಿದ್ದು ನಿಮಗೂ ಗೊತ್ತಿದ್ದಿರಬಹುದು. ಈ ವಿಡಿಯೋ ವೈರಲ್ ಆದ ಬಳಿಕ ಇಂತಹ ಹಲವಾರು ಘಟನೆಗಳು ಬೆಳಕಿಗೆ ಬರ್ತಾನೇ ಇದೆ.
ಇದೀಗ ಅಮೆರಿಕದಿಂದ ಇಂತಹದ್ದೇ ಒಂದು ಆನ್ಲೈನ್ ಮೀಟಿಂಗ್ನಲ್ಲಿ ನಡೆದ ವಿಚಿತ್ರ ಘಟನೆಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಕಾನ್ಫರೆನ್ಸ್ ಕಾಲ್ನಲ್ಲಿದ್ದರು.
ಸಾರ್ವಜನಿಕ ಸಭೆಯಲ್ಲಿ ಪೋಷಕರು ಭಾಗಿಯಾಗಿದ್ದಾರೆ ಎಂಬ ಅರಿವಿಲ್ಲದೇ ಶಾಲಾ ಮಂಡಳಿಯ ಸದಸ್ಯರು ಹಾಗೂ ಅಧ್ಯಕ್ಷರು ಪೋಷಕರನ್ನ ಅಪಹಾಸ್ಯ ಮಾಡೋಕೆ ಹೋಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದಂಡ ತೆತ್ತಿದ್ದಾರೆ. ಉತ್ತರ ಕ್ಯಾಲಿರ್ಫೋನಿಯಾದ ಶಾಲೆಯೊಂದರ ಆನ್ಲೈನ್ ಮೀಟಿಂಗ್ನಲ್ಲಿ ಈ ಘಟನೆ ನಡೆದಿದೆ.
ಫೆಬ್ರವರಿ 17ನೇ ತಾರೀಖಿನಿಂದು ಶಾಲೆಗಳ ಪುನಾರಂಭ ವಿಚಾರವಾಗಿ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿತ್ತು ಎನ್ನಲಾಗಿದೆ. ಮುಜುಗರದ ಘಟನೆ ನಡೆದ 2 ದಿನಗಳ ಬಳಿಕ ಕಿಮ್ ಬಿಡೆ, ಎರಿಕಾ ಇಪ್ಪೊಲಿಟೋ ಹಾಗೂ ರಿಚಿ ಮಸದಾಸ್ ಜೊತೆ ಅಧ್ಯಕ್ಷೆ ಲಿಸಾ ಬ್ರಿಜೆಂಡೈಸ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಯುಟ್ಯೂಬ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಮೊದಲು ಲಿಸಾ ಕರೆಯಲ್ಲಿ ನಾವು ಮಾತ್ರ ಇದ್ದೇವಾ ಎಂದು ಕೇಳುತ್ತಾರೆ. ಬಳಿಕ ಆಡಳಿತ ಮಂಡಳಿಯ ಸದಸ್ಯರೊಬ್ಬರು ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸುವ ಮೂಲಕ ಮನೆಯಲ್ಲಿ ಆರಾಮಾಗಿ ಗಾಂಜಾ ಸೇವಿಸೋಕೆ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಮಾತನ್ನ ಕೆಲ ಪೋಷಕರು ಕೇಳಿಸಿಕೊಂಡಿದ್ದು ಆಡಳಿತ ಮಂಡಳಿ ಅಧ್ಯಕ್ಷೆ ಹಾಗೂ ಸದಸ್ಯರ ರಾಜೀನಾಮೆಗೆ ಆಗ್ರಹಿಸಿದ್ದರು,