ಜಗತ್ತಿನ ಅತಿ ದೊಡ್ಡ ಕಾಫಿ ಪೇಂಟಿಂಗ್ ಕಲಾಕೃತಿ ಸೃಷ್ಟಿಸಿರುವ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಪುಸ್ತಕ ಸೇರಿದ್ದಾರೆ.
ಒಹುದ್ ಅಬ್ದುಲ್ಲಾ ಅಲ್ಮಾಲ್ಕೀ ಹೆಸರಿನ ಈ ಮಹಿಳೆ, ಬಳಕೆ ಅವಧಿ ಮುಗಿದು ಹೋದ ಕಾಫಿ ಪುಡಿ ಬಳಸಿಕೊಂಡು ಸೌದಿ ಹಾಗೂ ನೆರೆಯ ದೇಶ ಯುಎಇಯ ಪ್ರಮುಖ ನಾಯಕರ ಚಿತ್ರವನ್ನು 220 ಚದರ ಅಡಿ ಜಾಗದಲ್ಲಿ ರಚಿಸಿದ್ದಾರೆ. ’ನಸೀಜ್ 1’ (ಜೊತೆಯಾಗಿ ಬೆಸೆದ) ಹೆಸರಿನ ಈ ಚಿತ್ರವನ್ನು, ಏಳು ಬಟ್ಟೆಗಳನ್ನು ಜೋಡಿಸಿ, ಅವುಗಳ ಮೇಲೆ ಬರೆಯಲಾಗಿದೆ. ಜೆಡ್ಡಾ ನಗರದಲ್ಲಿ ಈ ಚಿತ್ರ ರಚಿಸಲಾಗಿದೆ.
“ಈ ಕೆಲಸವನ್ನು ಪೂರ್ಣಗೊಳಿಸಲು ನನಗೆ 45 ದಿನಗಳು ಬೇಕಾಯಿತು. ಇಬ್ಬರು ಸಾಕ್ಷಿಗಳು ಈ ಕೆಲಸದ ವಿಡಿಯೋ ಹಾಗೂ ಡ್ರೋನ್ ಫುಟೇಜ್ ಮಾಡಿಕೊಂಡಿದ್ದಾರೆ” ಎಂದು ಅಲ್ಮಾಲ್ಕೀ ತಿಳಿಸಿದ್ದಾರೆ.