alex Certify ಕೊರೊನಾ ಲಸಿಕೆ ಸ್ವೀಕರಿಸಿದ ಸೌದಿ ಅರೇಬಿಯಾ ಪ್ರಿನ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಸ್ವೀಕರಿಸಿದ ಸೌದಿ ಅರೇಬಿಯಾ ಪ್ರಿನ್ಸ್…!

ಸೌದಿ ಅರೇಬಿಯಾದ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್ ಶುಕ್ರವಾರ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ.

ಕೊರೊನಾ ಲಸಿಕೆಯನ್ನ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿರುವ ಸೌದಿ ಅರೇಬಿಯಾ ಪ್ರಿನ್ಸ್ ಕಾರ್ಯಕ್ಕೆ ಆರೋಗ್ಯ ಸಚಿವ ಡಾ, ತವ್​ಫಿಕ್​ ಅಲ್​ ರಾಬಿಯಾ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಷನ್​ 2030 ಯೋಜನೆಯ ಅಡಿಯಲ್ಲಿ ಕೊರೊನಾ ವಿರುದ್ಧ ಸಮರ ಸಾರಿರುವ ಸೌದಿ ಅರೇಬಿಯಾ ಫೈಜರ್​ ಕೊರೊನಾ ಲಸಿಕೆಯನ್ನ ಬಳಕೆ ಮಾಡುತ್ತಿದೆ. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ಮುಂಜಾಗ್ರತಾ ಕ್ರಮವೇ ಮುಖ್ಯ ಎಂಬ ಮಾತನ್ನ ಒತ್ತಿ ಒತ್ತಿ ಹೇಳುತ್ತಿರುವ ಸೌದಿ ಅರೇಬಿಯಾ ಫೈಜರ್ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ. ಈ ತಿಂಗಳ ಆರಂಭದಲ್ಲೇ ಸೌಧಿ ಅರೇಬಿಯಾ ಫೈಜರ್​ ಹಾಗೂ ಬಯೊಟೆಕ್​ ಕಂಪನಿ ತಯಾರಿಸಿದ ಲಸಿಕೆಯನ್ನ ಸ್ವೀಕಾರ ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...